ಅಮೆರಿಕದ ಸ್ಯಾಟ್‌ಲೈಟ್‌ಗಳಿಗೆ ಅತಿದೊಡ್ಡ ಬೆದರಿಕೆ!

masthmagaa.com:

ಇತ್ತೀಚಿನ ವರ್ಷಗಳಲ್ಲಿ ಕೇವಲ ಭೂಮಿಯ ಮೇಲೆ ಅಲ್ಲ, ಬಾಹ್ಯಾಕಾಶದಲ್ಲೂ ಸ್ಪರ್ಧೆ ಜಾಸ್ತಿಯಾಗ್ತಿದೆ. ಚಂದ್ರನ ಅಂಗಳದಲ್ಲಿ ಯಾರು ಮೊದಲು ಇಳಿತಾರೆ ಅಂತ ಭಾರತ ಹಾಗೂ ರಷ್ಯಾ ನಡುವೆ ಸ್ಪರ್ಧೆ ಇದ್ರೆ, ಅತ್ತ ಅಮೆರಿಕದ ಜೊತೆ ಚೀನಾ ಹಾಗೂ ರಷ್ಯಾ ಮತ್ತೊಂತರ ಕಾಂಪಿಟೇಶನ್‌ಗೆ ಇಳಿದಿವೆ. ಎಲ್ಲದರಲ್ಲೂ ನಾವೇ ಮೊದಲು ಇರಬೇಕೊ ಅನ್ನೊ ನಿಟ್ಟಿನಲ್ಲಿ ಮತ್ತೊಂದು ದೇಶಗಳ ಮೇಲೆ ದಾಳಿ ಮಾಡಲಾಗ್ತಿದೆ. ಇದೀಗ ಈ ಕುರಿತು ಅಮೆರಿಕದ ಗುಪ್ತಚರ ಇಲಾಖೆ, ಅಲ್ಲಿನ ಸ್ಥಳೀಯ ಬಾಹ್ಯಾಕಾಶ ಇಂಡಸ್ಟ್ರಿಗೆ ಎಚ್ಚರಿಕೆ ನೀಡಿದೆ. ಚೀನಾ ಹಾಗೂ ರಷ್ಯಾ ನಡೆಸ್ತಾಯಿರೊ ಸ್ಯಾಟ್‌ಲೈಟ್‌ ದಾಳಿಗಳು ಹಾಗೂ ಬೇಹುಗಾರಿಕೆಯಿಂದ ಅಪಾಯಗಳು ಹೆಚ್ಚಾಗಲಿವೆ. ಬಾಹ್ಯಾಕಾಶಕ್ಕೆ ಸಂಬಂಧಿಸಿದ ಅಮೆರಿಕದ ಕಂಪನಿಗಳು ಸೈಬರ್‌ ಅಟ್ಯಾಕ್‌, ತಾಂತ್ರಿಕ ಹೂಡಿಕೆ, ಪ್ರಮುಖ ಸಪ್ಲೈ ಚೇನ್‌ಗಳನ್ನ ಟಾರ್ಗೆಟ್‌ ಮಾಡೋದು ಹಾಗೂ ಬಾಹ್ಯಾಕಾಶ ತಂತ್ರಜ್ಞಾನವನ್ನ ಪಡೆಯಲು ಇತರ ಟೆಕ್ನಿಕ್‌ಗಳನ್ನ ಬಳಸುವ ಅಪಾಯಗಳನ್ನ ಫೇಸ್‌ ಮಾಡಲಿವೆ ಅಂತ ಅಲ್ಲಿನ National Counterintelligence and Security Center, FBI ಹಾಗೂ ವಾಯುಸೇನೆ ತಮ್ಮ ಜಂಟಿ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿವೆ. ಜೊತೆಗೆ ವಿದೇಶಿ ಗುಪ್ತಚರ ಕಾರ್ಯಾಚಾರಣೆಗಳು ಅಮೆರಿಕ ಸ್ಯಾಟ್‌ಲೈಟ್‌ಗಳನ್ನ ಡಿಸ್ಟರ್ಬ್‌ ಮಾಡುತ್ವೆ. ಅಂದ್ರೆ ಕಮ್ಯುನಿಕೇಶನ್‌, ಇಮೇಜ್‌ಗಳನ್ನ ಸೆರೆ ಹಿಡಿಯೋದು ಹಾಗೂ ರಿಮೋಟ್‌ ಸೆನ್ಸಿಂಗ್‌ನಂಥ ಕಾರ್ಯಗಳನ್ನ ಅಡ್ಡಿಪಡಿಸಬಹುದು ಅಂತ ಕಳವಳ ವ್ಯಕ್ತಪಡಿಸಿವೆ. ಅಂದ್ಹಾಗೆ ಇತ್ತೀಚೆಗೆ ಅಮೆರಿಕದ ಸ್ಯಾಟ್‌ಲೈಟ್‌ಗಳ ಮೇಲೆ ಹಲವಾರು ದಾಳಿಗಳು ನಡೆದಿವೆ. ಅದರ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಆದ್ರೆ ಇತ್ತ ಚೀನಾ ಹಾಗೂ ರಷ್ಯಾ ಈ ಆರೋಪಗಳನ್ನ ಅಲ್ಲಗೆಳೆದಿವೆ. ಅಮೆರಿಕದಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ಮಾತನಾಡಿ, ನಮ್ಮ ದೇಶ ಬಾಹ್ಯಾಕಾಶದಲ್ಲಿ ಯಾವಾಗ್ಲೂ ಶಾಂತಿಯುತ ಅನ್ವೇಷಣೆಯನ್ನ ಮಾಡಿದೆ. ಹಾಗೂ ಈ ಅನ್ವೇಷಣೆಯಿಂದ ಮಾನವಕುಲಕ್ಕೆ ಉಪಯೋಗ ಆಗುತ್ತೆ ಅಂತ ನಂಬುತ್ತೆ ಅಂತ ಹೇಳಿದ್ದಾರೆ. ಆದ್ರೆ ರಷ್ಯಾದ ರಾಯಭಾರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಂದ್ಹಾಗೆ 2022ರಲ್ಲಿ ರಷ್ಯಾ ಯುಕ್ರೇನ್‌ ಮೇಲೆ ದಾಳಿ ಮಾಡುವ ಮೊದಲು ಅಮೆರಿಕದ Viasat ಸ್ಪೇಸ್‌ ಕಂಪನಿ ಮೇಲೆ ಸೈಬರ್‌ ಅಟ್ಯಾಕ್‌ ಆಗಿತ್ತು. ಅಷ್ಟೇ ಅಲ್ದೇ ಯುಕ್ರೇನ್‌ನಲ್ಲಿ ತನ್ನ ಸ್ಟಾರ್‌ ಲಿಂಕ್‌ ಯೋಜನೆ ಮೂಲಕ ಸೇವೆಗಳನ್ನ ಒದಗಿಸೋಕೆ ಮುಂದಾಗಿದ್ದ ಎಲಾನ್ ಮಸ್ಕ್‌ರ ಕಂಪನಿ ಸ್ಪೇಸ್‌ X ಕೂಡ ದಾಳಿಗೊಳಗಾಗಿ, ಜ್ಯಾಮಿಂಗ್‌ ಸಮಸ್ಯೆಯನ್ನ ಎದುರಿಸಿತ್ತು. ಅಲ್ದೇ ಇದೀಗ ಮತ್ತೆ ಹೊಸ ಘಟಕವೊಂದನ್ನ ಟಾರ್ಗೆಟ್‌ ಮಾಡಲಾಗಿದೆ ಅಂತ ಅಮೆರಿಕದ ಬಾಹ್ಯಾಕಾಶ ಪಡೆ ಹೇಳಿದೆ. ಈ ಬಾರಿ ಗ್ರೌಂಡ್‌ ಸ್ಟೇಶನ್‌ಗಳ ಮೇಲೆ ಫೋಕಸ್‌ ಮಾಡಲಾಗ್ತಿದೆ. ಅದ್ರಿಂದ ಸ್ಪೇಸ್‌ನಲ್ಲಿರೊ ಸ್ಯಾಟ್‌ಲೈಟ್‌ಗಳಿಗೆ ಬೆದರಿಕೆಯಿದೆ ಅಂತ ಹೇಳಿದೆ. ಇದು ತನ್ನ ದೇಶದ ಆರ್ಥಿಕತೆ ಹಾಗೂ ರಾಷ್ಟ್ರೀಯ ಭದ್ರತೆಗಾಗಿ ಬಾಹ್ಯಾಕಾಶದ ಮೇಲೆ ಅತಿಯಾಗಿ ಡಿಪೆಂಡ್‌ ಆಗಿರೋ ಅಮೆರಿಕದ ಆತಂಕಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply