ದೇಶದ ಪ್ರತಿ ನಗರದಲ್ಲಿ ಸಹಕಾರಿ ಬ್ಯಾಂಕ್‌ ಸ್ಥಾಪನೆ: ಅಮಿತ್‌ ಶಾ

masthmagaa.com:

ದೇಶದ ಪ್ರತಿಯೊಂದು ನಗರದಲ್ಲೂ ‘ಸಿಟಿ ಕೋ -‌ ಆಪರೇಟಿವ್ ಬ್ಯಾಂಕ್‌’ ಸ್ಥಾಪನೆ ಮಾಡ್ತೀವಿ ಅಂತ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಹೇಳಿದ್ದಾರೆ. ರಾಷ್ಟ್ರೀಯ ನಗರ ಸಹಕಾರ ಹಣಕಾಸು ಮತ್ತು ಅಭಿವೃದ್ದಿ ನಿಗಮ ಉದ್ಘಾಟನೆ ವೇಳೆ ಅವರು ಈ ಘೋಷಣೆ ಮಾಡಿದ್ದಾರೆ. ದೇಶದಲ್ಲಿ ದೀರ್ಘಕಾಲದಿಂದಲೂ ಸಹಕಾರಿ ಕ್ಷೇತ್ರ ಕಾರ್ಯ ನಿರ್ವಹಿಸ್ತಿದೆ. ಆದ್ರೆ ದೇಶದ ಆರ್ಥಿಕ ಬೆಳವಣಿಗೆಯನ್ನ ಗಟ್ಟಿ ಮಾಡುವಲ್ಲಿ ಅವುಗಳು ಮಹತ್ತರ ಪಾತ್ರ ವಹಿಸಲಿಲ್ಲ. ಅವು ವೇಗವಾಗಿ ಬೆಳವಣಿಗೆ ಕಾಣಲಿಲ್ಲ. ಆದ್ರೆ ನಗರ ಸಹಕಾರಿ ಬ್ಯಾಂಕ್‌ಗಳಿಗೆ ಸಹಾಯ ಮಾಡುವುದು ಈ ನಿಗಮದ ಉದ್ದೇಶ. ದೇಶದಲ್ಲಿ 1500 ಕ್ಕೂ ಅಧಿಕ ನಗರ ಸಹಕಾರಿ ಬ್ಯಾಂಕ್‌ಗಳು ಇವೆ. 11 ಸಾವಿರ ಶಾಖೆಗಳಿವೆ. ಅವು 5 ಲಕ್ಷ ಡೆಪಾಸಿಟ್‌ ಹೊಂದಿವೆ. ಹೀಗಾಗಿ ಈ ಕ್ಷೇತ್ರವನ್ನ ಉತ್ತಮ ಪಡಿಸೋಕೆ ಭಾರತದ ಪ್ರತಿ ನಗರದಲ್ಲಿ ಸಹಕಾರಿ ಬ್ಯಾಂಕ್‌ ಆರಂಭ ಮಾಡ್ತೀವಿ ಅಂತ ಅಮಿತ್‌ ಶಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply