ಚುನಾವಣಾ ಬಾಂಡ್‌ ಕಾದಾಟ: ಸೋನಿಯಾ, ಶಾ ಮಾತಿನ ಜಟಾಪಟಿ!

masthmagaa.com:

ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಅಕೌಂಟ್‌ ಫ್ರೀಜ್‌ ಹಾಗೂ ಚುನಾವಣಾ ಬಾಂಡ್‌ಗಳ ವಿಚಾರವಾಗಿ ಬಿಜೆಪಿ ವಿರುದ್ದ ಕಾಂಗ್ರೆಸ್‌ ನಾಯಕರು ಕೆಂಡಾಮಂಡಲರಾಗಿದ್ದಾರೆ. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಜಂಟಿ ಪ್ರತಿಕಾಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ʻಕಾಂಗ್ರೆಸ್‌ ಪಕ್ಷಕ್ಕೆ ಜನ ಸಾಮಾನ್ಯರು ನೀಡಿದ ದೇಣಿಗೆಯನ್ನ ಬಲವಂತವಾಗಿ ಲೂಟಿ ಮಾಡಿ ಹೆಚ್ಚೆಚ್ಚು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ತನ್ನ ಖಜಾನೆ ತುಂಬಿಸಿಕೊಂಡಿದೆ. ಅಲ್ದೇ ಕಾಂಗ್ರೆಸ್‌ನ್ನ ಆರ್ಥಿಕವಾಗಿ ದುರ್ಬಲಗೊಳಿಸಲು ಮೋದಿ ಸರ್ಕಾರ ವ್ಯವಸ್ಥಿತ ಶಡ್ಯಂತ್ರ ಮಾಡ್ತಿದೆʼ ಅಂತ ವಾಗ್ದಾಳಿ ನಡೆಸಿದ್ದಾರೆ. ಕಳೆದ ತಿಂಗಳು ಆದಾಯ ಇಲಾಖೆ 2018-19 ರ ಆರ್ಥಿಕ ವರ್ಷದ ಬಾಕಿ ಮತ್ತು ದಂಡವಾಗಿ 210 ಕೋಟಿ ರೂಪಾಯಿ ಟ್ಯಾಕ್ಸ್‌ ಡಿಮಾಂಡ್‌ ಇಟ್ಟಿದ್ದು, 115 ಕೋಟಿ ರೂಪಾಯಿ ಮೊತ್ತ ಉಳಿಸಿಕೊಂಡಿದ್ದ ಕಾಂಗ್ರೆಸ್‌ ಅಕೌಂಟ್‌ನ್ನ ಸ್ಥಗಿತಗೊಳಿಸಿತ್ತು. ಹೀಗಾಗಿ ಈ ವಿಚಾರವಾಗಿ ಕೈ ನಾಯಕರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತ್ಯುತ್ತರವೆಂಬಂತೆ ಅತ್ತ ಕೇಂದ್ರ ಗೃಹ ಸಚಿವ ಅಮಿತ್‌ ಶಾ‌ ಕೂಡ ಚುನಾವಣಾ ಬಾಂಡ್‌ ವಿಚಾರವಾಗಿ ಕಾಂಗ್ರೆಸ್ ನಾಯಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ʻಕಾಂಗ್ರೆಸ್‌ನವ್ರು 1600 ಕೋಟಿ ರೂಪಾಯಿ ಹಣ ಪಡ್ಕೊಂಡಿದ್ದಾರಲ್ಲ ಅದು ಹಫ್ತಾ ವಸೂಲಿನಾ? ಅಂದ್ರೆ ಕಾಂಗ್ರೆಸ್‌ನ ಸುಲಿಗೆ ಹಣಾನಾ? ಇದಕ್ಕೆ ಮೊದ್ಲು ರಾಹುಲ್‌ ಗಾಂಧಿ ಕ್ಲಾರಿಟಿ ನೀಡ್ಬೇಕುʼ ಅಂತ ಟಾಂಗ್ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply