ಕ್ರಿಕೆಟ್‌ ಮೈದಾನಕ್ಕಿಳಿದ ನಂದಿನಿ! ಜರ್ಸಿಯಲ್ಲಿ ಮಿಂಚಲು ಸಿದ್ದ!

masthmagaa.com:

ದೇಶದ ಪ್ರಮುಖ ಹಾಲು ಉತ್ಪನ್ನಗಳ ಕಂಪನಿ ಅಮುಲ್‌ ಮತ್ತು ನಂದಿನಿ ನಡುವಿನ ವಾರ್‌ ಇದೀಗ ಕ್ರಿಕೆಟ್‌ ಅಖಾಡಕ್ಕೂ ತಲುಪಿದೆ. ಮುಂಬರೋ ಜೂನ್‌ನಲ್ಲಿ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯೋ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ಗೆ ತಂಡಗಳ ಪ್ರಾಯೋಜಕತ್ವ ವಹಿಸೋಕೆ KMF ಮುಂದಾಗಿದೆ. ಅಂದ್ರೆ ವಿಶ್ವಕಪ್‌ನಲ್ಲಿ ಭಾಗವಹಿಸೋ ಟೀಮ್‌ಗಳ ಜರ್ಸಿಯಲ್ಲಿ ನಂದಿನಿ ತನ್ನ ಲೋಗೋ ಪ್ರಮೋಟ್‌ ಮಾಡೋಕೆ ಸಜ್ಜಾಗಿದೆ. ಅಮುಲ್‌ ಹಿಡಿದ ಹಾದಿಯನ್ನ ಈಗ KMFನ ನಂದಿನಿ ತುಳಿಯೋಕೆ ಸೆಟ್‌ ಆಗಿದೆ. ಹೀಗಂತ KMFನ ವ್ಯವಸ್ಥಾಪಕ ನಿರ್ದೇಶಕ ಎಮ್‌ಕೆ ಜಗದೀಶ್‌ ತಿಳಿಸಿದ್ದಾರೆ. ʻನಾವು ಇದಕ್ಕೆ ಟೆಂಡರ್‌ ಆಹ್ವಾನಿಸಿದ್ದು, ಸದ್ಯ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಚುನಾವಣಾ ಆಯೋಗದ ಅನುಮತಿ ಪಡೆದು ಟೆಂಡರ್‌ನ್ನು ಅಂತಿಮಗೊಳಿಸಲಿದ್ದೇವೆ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ಹಿಂದೆ 2011 ವಿಶ್ವಕಪ್‌ನಲ್ಲಿ ಅಮುಲ್‌ ನೆದರ್‌ಲ್ಯಾಂಡ್ಸ್‌ ತಂಡಕ್ಕೆ ಸ್ಪಾನ್ಸರ್‌ ಮಾಡಿತ್ತು. ನಂತ್ರ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳಿಗೂ ಸ್ಪಾನ್ಸರ್‌ ಮಾಡಿತ್ತು. ಈಗ ಅಮುಲ್‌ಗೆ ಟಕ್ಕರ್‌ ಕೊಡೋಕೆ ನಂದಿನಿ ಕೂಡ ಅದೇ ಹಾದಿ ಹಿಡಿದಿದೆ. ಮಧ್ಯಪ್ರಾಚ್ಯ, ಸಿಂಗಾಪುರ, ಭೂತಾನ್ ಮತ್ತು ಮ್ಯಾನ್ಮಾರ್ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಕೆಎಂಎಫ್ ಅಸ್ತಿತ್ವ ಹೊಂದಿದೆ. ಅಮೆರಿಕಕ್ಕೂ ಸಿಹಿ ತಿಂಡಿಗಳನ್ನ ರಫ್ತು ಮಾಡ್ತಿದೆ. ಈ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್‌ನ ಪ್ರಾಯೋಜಕತ್ವ ಪಡೆದುಕೊಳ್ಳುವ ಮೂಲಕ ಬ್ರ್ಯಾಂಡ್‌ನ್ನ ಜನಪ್ರಿಯವಾಗಿಸೋದು. ಜೊತೆಗೆ ಇಂಟರ್‌ನ್ಯಾಷನಲ್‌ ಆಟಗಾರರನ್ನ ಫೋಟೋ ಶೂಟ್‌ಗಳಿಗೆ ಸೆಳೆದುಕೊಂಡು ಜಾಹೀರಾತುಗಳಿಗೆ ಅವರನ್ನು ಬಳಸಿಕೊಳ್ಳೋದು KMFನ ಉದ್ದೇಶ ಆಗಿದೆ. ನಂದಿನಿ ಈಗಾಗಲೇ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡದ ಸಹ ಪ್ರಾಯೋಜಕ ಸಂಸ್ಥೆಯಾಗಿದೆ. ಬೆಂಗಳೂರಿನ ಐಪಿಎಲ್ ತಂಡ ಆರ್‌ಸಿಬಿಗೂ ಕೆಎಂಎಫ್‌ ಟ್ರೈ ಮಾಡಿತ್ತು. ಆದ್ರೆ ಕಾಸ್ಟ್ಲಿ ಅಂತ ಸುಮ್ಮನಾಗಿತ್ತು. ಅಂದ್ಹಾಗೆ ಈ ವರ್ಷದ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್‌ ಜೂನ್ 1ರಿಂದ 29ರವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದ್ದು, ದಾಖಲೆಯ 20 ತಂಡಗಳು ಇದರಲ್ಲಿ ಭಾಗವಹಿಸುತ್ತಿವೆ.

-masthmagaa.com

Contact Us for Advertisement

Leave a Reply