ಬ್ರಿಟನ್‌: ಭಾರತೀಯ ರಾಯಭಾರ ಕಚೇರಿಯ ದಾಳಿಕೋರನ ಬಂಧನ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ NIA, ಕಳೆದ ವರ್ಷ ಲಂಡನ್‌ನ ಭಾರತೀಯ ರಾಯಭಾರ ಕಚೇರಿ ಬಳಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬನನ್ನ ಅರೆಸ್ಟ್‌ ಮಾಡಿದೆ. ಇಂದರ್‌ಪಾಲ್‌ ಸಿಂಗ್‌ ಗಾಬಾ ಅನ್ನೋ ಈತ ಭಾರತದ ತ್ರಿವರ್ಣ ಧ್ವಜವನ್ನ ಕೆಳಗಿಳಿಸಿ ಅಪಮಾನ ಮಾಡಿದ್ದ ಗುಂಪಿಗೆ ಸೇರಿದ್ದ ಎನ್ನಲಾಗಿದೆ. ಅಂದ್ಹಾಗೆ ಬ್ರಿಟಿಷ್‌ ಪ್ರಜೆಯಾಗಿರೋ ಈತ ಮೂಲತಃ ಅಫ್ಘಾನಿಸ್ತಾನದವನು. ಲಂಡನ್‌ನಲ್ಲಿ 3 ಕಿರಾಣಿ ಅಂಗಡಿಯನ್ನ ಇಟ್ಕೊಂಡಿದ್ದ. ದಿಲ್ಲಿಯಲ್ಲಿ ಕೂಡ ಈತನಿಗೆ ಮನೆ ಇತ್ತು ಆದ್ರೆ ಲೀಸ್‌ಗೆ ಕೊಟ್ಟಿದ್ದ. ಕಳೆದ ವರ್ಷ ದುಬೈ ಮೂಲಕ ಪಾಕ್‌ಗೆ ಬಂದು ಅಲ್ಲಿನ ನಾನ್‌ಕಾನ ಸಾಹಿಬ್‌ ಅನ್ನೊ ಸಿಖ್ಖರ ಪವಿತ್ರ ಸ್ಥಳದ ಭೇಟಿಗೆ ಬಂದಿದ್ದ. ನಂತ್ರ ಡಿಸೆಂಬರ್‌ 9ರಂದು ಭಾರತದ ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಲು ವಾಘಾ ಗಡಿ ಮೂಲಕ ಭಾರತಕ್ಕೆ ಎಂಟರ್‌ ಆಗೋಕೆ ನೋಡ್ತಿದ್ದ. ಆದ್ರೆ ಲಂಡನ್‌ ಗಲಭೆಯಲ್ಲಿ ಭಾಗಿಯಾಗಿರೋರ ಮೇಲೆ ಭಾರತ ಲುಕ್‌ ಔಟ್‌ ನೋಟಿಸ್‌ ಹೊರಡಿಸಿತ್ತು. ಹೀಗಾಗಿ ಗಡಿಯಲ್ಲಿ ಭದ್ರತಾ ಪಡೆಗಳು ಈತನನ್ನ ಹಿಡಿದು ವಶಕ್ಕೆ ಪಡೆದುಕೊಂಡಿವೆ. ಇನ್ನು ಈಗ NIA ಈತನನ್ನ ಅರೆಸ್ಟ್‌ ಮಾಡಿದೆ. ಈ ಬಗ್ಗೆ ಬ್ರಿಟನ್‌ಗೂ ಮಾಹಿತಿ ನೀಡಲಾಗಿದೆ… ಇನ್ನು ವಿಚಾರಣೆ ವೇಳೆ ಖಲಿಸ್ತಾನಿ ಉಗ್ರ ಅಮೃತ್‌ಪಾಲ್‌ ಸಿಂಗ್‌ ಮೇಲೆ ಕ್ರಮ ಕೈಗೊಂಡಿದಕ್ಕೆ ಈ ಕೃತ್ಯ ಎಸಗಲಾಗಿತ್ತು. ಭಾರತೀಯ ರಾಯಭಾರ ಕಚೇರಿ ಹಾಗು ರಾಯಭಾರ ಅಧಿಕಾರಿಗಳ ಮೇಲೆ ದಾಳಿ ಮಾಡುವ ಭಾರೀ ಪಿತೂರಿ ನಡೆಸಲಾಗಿತ್ತು ಅನ್ನೋದು ಬಯಲಾಗಿದೆ.

-masthmagaa.com

Contact Us for Advertisement

Leave a Reply