ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿರುವ ಭಾರತದ ಅಂಜುಗೆ ಭರ್ಜರಿ ಗಿಫ್ಟ್‌ ನೀಡಿದ ಪಾಕಿಸ್ತಾನ!

masthmagaa.com:

ಇತ್ತ ಫೇಸ್‌ಬುಕ್‌ ನಲ್ಲಿ ಪರಿಚಯ ಆಗಿ ತನ್ನೆರಡು ಮರಿಗಳ ಬಿಟ್ಟು, ಪಾಕ್‌ಗೆ ಹಾರಿರೋ ರಾಜಸ್ಥಾನ ವಿವಾಹಿತ ಪ್ರೇಮಪಕ್ಷಿ ಅಂಜು, ಇಸ್ಲಾಂಗೆ ಕನ್ವರ್ಟ್‌ ಆಗಿದ್ಲು. ಇದೀಗ ಇಸ್ಲಾಂ ಧರ್ಮಕ್ಕೆ ಕನ್ವರ್ಟ್‌ ಆದ ಕಾರಣಕ್ಕೆ ಆಕೆಗೆ ಭಾರಿ ಉಡುಗೊರೆ ನೀಡಲಾಗಿದೆ. ಎರಡು ಮಕ್ಕಳ ತಾಯಿ ಅಂಜು ಈಗ ಫಾತಿಮಾ ಆಗಿದ್ದು, ಇದಕ್ಕಾಗಿ ಸ್ವಲ್ಪ ಹಣ ಹಾಗೂ ಜಮೀನನ್ನ ಗಿಪ್ಟ್‌ ಆಗಿ ನೀಡಲಾಗಿದೆ. ಖೈಬರ್‌ ಪಖ್ತುಂಖ್ವಾದಲ್ಲಿನ ರಿಯಲ್‌ ಎಸ್ಟೇಟ್‌ ಕಂಪನಿಯ ಸಿಇಒ ಮೊಹ್ಸಿನ್‌ ಝಾನ್‌ ಅಬ್ಬಾಸಿ, ಅಂಜು ಹಾಗೂ ನಸ್ರುಲ್ಲಾ ಅಬ್ಬಾಸಿ ಅವ್ರನ್ನ ಭೇಟಿ ಮಾಡಿದ್ದಾರೆ. ಈ ವೇಳೆ ಅಂಜುಗೆ ಚೆಕ್‌ ಹಾಗೂ ಲ್ಯಾಂಡ್‌ ಒಂದ್ರ ಡಾಕ್ಯುಮೆಂಟ್‌ ಅನ್ನ ಹಸ್ತಾಂತರ ಮಾಡಿದ್ದಾರೆ. ಬಳಿಕ ಮಾತಾಡಿರುವ ಮೊಹ್ಸಿನ್‌, ಅಂಜುಳನ್ನ ಇಸ್ಲಾಂಗೆ ಸ್ವಾಗತಿಸಿ ಆಕೆ ಪಾಕ್‌ನ್ನ ತನ್ನ ಮನೆಯಂತೆಯೇ ಫೀಲ್‌ ಮಾಡ್ಲಿ ಅಂತ ಈ ಗಿಫ್ಟ್‌ ನೀಡಿದ್ದೇನೆ, ನವದಂಪತಿಗೆ ಅಭಿನಂದನೆ ಅಂತ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply