ರವೀಂದ್ರನಾಥ್‌ ಟ್ಯಾಗೋರ್‌ ಪಾತ್ರದಲ್ಲಿ ಅನುಪಮ್‌ ಖೇರ್‌!

masthmagaa.com:

ದಿ ಕಾಶ್ಮೀರಿ ಫೈಲ್ಸ್‌ ಚಿತ್ರದಲ್ಲಿ ನಟಿಸಿದ್ದ ಅನುಪಮ್‌ ಖೇರ್‌ ಭಾರತದಲ್ಲಿ ಒಳ್ಳೆ ಬೇಡಿಕೆ ಇರುವ ನಟ. 68 ವರ್ಷದ ಅನುಪಮ್‌ ಖೇರ್‌ ಯಾವಾಗಲೂ ಸಿನಿಮಾ ರಂಗ ಸಾಕಾಯ್ತು ಅಂತ ಸುಮ್ಮನೆ ಕುಳಿತವರಲ್ಲ. ಈಗಲೂ ಕೂಡ ಹೊಸ ಹೊಸ ಸಿನಿಮಾಗಳಿಗೆ ಸಹಿ ಹಾಕಿ ಮುನ್ನುಗ್ತಾ ಇದ್ದಾರೆ. ಇದೀಗ ರವೀಂದ್ರನಾಥ್‌ ಟ್ಯಾಗೋರ್‌ ಅವರ ಬಯೋಪಿಕ್‌ನಲ್ಲಿ ಅನುಪಮ್‌ ಖೇರ್‌ ಕಾಣಿಸಿಕೊಳ್ಳಲಿದ್ದಾರೆ, ಅದು ಕೂಡ ಮೇನ್‌ ಲೀಡ್‌ನಲ್ಲಿ.

ಬೆಂಗಾಲಿ ಕವಿ, ಲೇಖಕ, ತತ್ವಜಾನಿ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರನಾಥ್​ ಟ್ಯಾಗೋರ್​ ಅವರ ಪಾತ್ರವನ್ನು ಅನುಪಮ್‌ ಖೇರ್‌ ಅವರು ನಿಭಾಯಿಸಲಿದ್ದಾರೆ. ಒಂದು ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ಅನುಪಮ್‌ ಖೇರ್‌ ಅಭಿಮಾನಿಗಳಿಗೆ ನ್ಯೂಸ್‌ ಕೊಟ್ಟಿದ್ದಾರೆ. “ನನ್ನ 538ನೇ ಸಿನಿಮಾದಲ್ಲಿ ಗುರುದೇವ ರವೀಂದ್ರನಾಥ್ ಟ್ಯಾಗೋರ್ ಅವರ ಪಾತ್ರ ಮಾಡಲು ಖುಷಿ ಆಗ್ತಾ ಇದೆ. ಸಮಯ ಬಂದಾಗ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇನೆ. ತೆರೆಮೇಲೆ ಇಂಥ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ”ಅಂತ ಅನುಪಮ್ ಖೇರ್ ಅವರು ಪೋಸ್ಟ್ ಶೇರ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply