ಮಗಳ ಫೋಟೋ ವೈರಲ್ ಮಾಡಿದ ಮಾಧ್ಯಮದ ವಿರುದ್ಧ ಸಿಟ್ಟಿಗೆದ್ದ ವಿರುಷ್ಕ!

masthmagaa.com:

ಸೆಲೆಬ್ರಿಟಿಗಳು ಅಥವಾ ಪಬ್ಲಿಕ್ ಫಿಗರ್ ಅಂದಮೇಲೆ ಅವರಿಗೂ, ಖಾಸಗಿತನಕ್ಕೂ ದೂರ ದೂರ. ಅವರಿಗೆ ಪರ್ಸನಲ್ ಲೈಫ್ ಅನ್ನೋದೆಲ್ಲ ಇರಲ್ಲ, ಪ್ರೊಫೆಷನ್ ಜೊತೆ ಜೊತೆಗೆ ಅವರ ಖಾಸಗಿ ಜೀವನದಲ್ಲಿ ಏನೇ ಡೆವಲಪ್ಮೆಂಟ್ ಆದ್ರೂ ಇಟ್ಸ್ ಓಪನ್ ಫಾರ್ ಪಬ್ಲಿಕ್ ಅನ್ನೋ ಭಾವನೆ ಸಾಮಾನ್ಯವಾಗಿ ಇರತ್ತೆ. ಪ್ರೈವೇಟ್ ಆಗಿ ಇಡಬೇಕು ಎಂದುಕೊಂಡ ವಿಷಯವನ್ನ ಎಷ್ಟೇ ಟ್ರೈ ಮಾಡಿದರೂ ಮೀಡಿಯಾ ಕಣ್ಣಿಂದ ಕೆಲವೊಮ್ಮೆ ತಪ್ಪಿಸೋದು ಕಷ್ಟ ಸಾಧ್ಯ. ಅದೂ ಅಲ್ಲದೆ ಗಂಡ ಹೆಂಡ್ತಿ ಇಬ್ಬರೂ ಸೆಲೆಬ್ರಿಟಿ ಆಗಿದ್ದರಂತೂ ಖಾಸಗಿತನ ಅನ್ನೋದು ಬಲು ದುಬಾರಿ.

ವಿರಾಟ್ ಮತ್ತು ಅನುಷ್ಕ ಶರ್ಮಾ ಗೆ ಹೆಣ್ಣು ಮಗು ಜನಿಸಿ ಸುಮಾರು ಒಂದು ವರ್ಷ ಕಳೆದಿದೆ. ಆದರೆ, ಇಲ್ಲಿಯ ತನಕ ಗಂಡ ಹೆಂಡತಿ ಇಬ್ಬರೂ ಕೂಡ ಎಲ್ಲೂ ಮಗುವಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪಬ್ಲಿಕ್ ಮಾಡಿಲ್ಲ. ಇದಕ್ಕೆ ಕಾರಣವೂ ಇದೆ. ಮಗಳ ಮುಖವನ್ನು ಜಗತ್ತಿಗೆ ತೋರಿಸೋದಕ್ಕೆ ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಅವರಿಗೆ ಇಷ್ಟ ಇಲ್ಲ. ಇದನ್ನ ಅವರಿಬ್ಬರೂ ಕಳೆದ ವರ್ಷ ಜನವರಿಯಲ್ಲೇ ಸ್ಪಷ್ಟಪಡಿಸಿದ್ದರು. ಮಗು ಜನಿಸಿದ ಕೆಲವೇ ದಿನಗಳಲ್ಲಿ ಅವರು ತಮ್ಮ ಈ ನಿರ್ಧಾರವನ್ನು ಕೂಡ ತಿಳಿಸಿದ್ದರು. ಇದು ಅವರ ವೈಯಕ್ತಿಕ ನಿರ್ಧಾರ. ಆದ್ರೆ ಮೊನ್ನೆ ಜನವರಿ 23 ನೇ ತಾರೀಖು ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೂರನೇ ಪಂದ್ಯದ ವೇಳೆ ಮಗಳ ಜೊತೆ ಅನುಶ್ಕಾ ಶರ್ಮಾ ಮ್ಯಾಚ್ ನೋಡುತ್ತಾ ಇದ್ದರು. ಈ ದೃಶ್ಯವನ್ನ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪ್ರಸಾರ ಮಾಡಿದೆ. ಕೆಲವೇ ಗಂಟೆಗಳಲ್ಲಿ ಅನುಶ್ಕ, ವಿರಾಟ್ ಮಗುವಿನ ಫೋಟೋ ದೇಶದಾದ್ಯಂತ, ಪ್ರಪಂಚದಾದ್ಯಂತ ವೈರಲ್ ಆಯಿತು. ಈಗ ಇದರ ಕುರಿತಂತೆ ಸೆಲ್ಬ್ರಿಟಿ ದಂಪತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ,ತಮ್ಮ ಬೇಸರವನ್ನು ತೋಡಿಕೊಂಡಿದ್ದಾರೆ.

ತಮ್ಮ ಅರಿವಿಗೆ ಬಾರದಂತೆಯೇ ಮಗಳು ವಮಿಕಾಳ ಮುಖವನ್ನು ತೋರಿಸಲಾಗಿರುವ ಬಗ್ಗೆ ಅವರಿಗೆ ಬೇಸರ ಇದೆ. ಮಗಳು ದೊಡ್ಡವಳಾಗುವವರೆಗೂ ಆಕೆಯನ್ನು ಜಗತ್ತಿಗೆ ಪರಿಚಯಿಸಬಾರದು ಎಂಬ ಈ ದಂಪತಿಯ ನಿರ್ಧಾರ. ಈ ನಿರ್ಧಾರವನ್ನ ಕೆಲವು ಮಾಧ್ಯಮಗಳು ಗೌರವಿಸಿದ್ದಾರೆ. ಆದರೆ ಮಗಳ ಫೋಟೋ ವೈರಲ್ ಆಗಿದ್ದರ ಬಗ್ಗೆ ಅನುಷ್ಕಾ ಶರ್ಮಾ-ವಿರಾಟ್​ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲರಿಗೂ ಹಾಯ್​… ನಿನ್ನೆ ಸ್ಟೇಡಿಯಂನಲ್ಲಿ ನಮ್ಮ ಮಗಳ ಪೋಟೋವನ್ನು ಸೆರೆಹಿಡಿಯಲಾಯಿತು ಮತ್ತು ಅದನ್ನು ವೈರಲ್​ ಮಾಡಲಾಗಿದೆ ಎಂಬುದು ನಮಗೆ ತಿಳಿದುಬಂದಿದೆ. ನಮಗೆ ಗೊತ್ತಿಲ್ಲದಂತೆಯೇ ಅದನ್ನು ಚಿತ್ರಿಸಲಾಗಿದೆ. ನಮ್ಮನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗುತ್ತಿದೆ ಎಂಬುದು ನಮಗೆ ತಿಳಿದಿರಲಿಲ್ಲ. ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ ಮತ್ತು ಮನವಿ ಮೊದಲಿನಂತೆಯೇ ಇರಲಿದೆ. ಮಗಳು ವಮಿಕಾಳ ಫೋಟೋ ಕ್ಲಿಕ್​ ಮಾಡದಿದ್ದರೆ, ಪ್ರಕಟ ಮಾಡದಿದ್ದರೆ ಅದಕ್ಕಾಗಿ ಧನ್ಯವಾದಗಳು’ ಎಂದು ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ತಿಳಿಸಿದ್ದಾರೆ.

ಅಲ್ಲ ಸ್ವಾಮಿ ಇಲ್ಲಿ ಒಂದು ಲಾಜಿಕ್ ಅರ್ಥ ಆಗಿಲ್ಲ ಅನುಷ್ಕಾ ಶರ್ಮಾ, ವಿರಾಟ್​ ಕೊಹ್ಲಿ ಇಬ್ಬರು ದೊಡ್ಡ ಸೆಲೆಬ್ರಿಟಿಗಳು ಅವರು ಹೋದಲ್ಲಿ-ಬಂದಲ್ಲಿ ಕ್ಯಾಮೆರಾಗಳು ಅವರನ್ನು ಮುತ್ತಿಕೊಳ್ಳುತ್ತವೆ.ಇದು ಇಬ್ಬರಿಗೂ ಗೊತ್ತಿರುತ್ತೆ. ಅದೂ ಅಲ್ಲದೆ ಇಲ್ಲಿ ತನಕ ರೀವೀಲ್ ಮಾಡದ ಮಗಳನ್ನ ಹೀಗೆ ಪಬ್ಲಿಕ್ ಈವೆಂಟ್ ಗೆ ಕರೆದುಕೊಂಡು ಬಂದರೆ ಹಸಿದು ಕೂತಿರುವ ಮೀಡಿಯಾ ಗಳು ಸುಮ್ಮನೆ ಇರುತ್ತವೆಯೇ? ಒಂದಾ ನೀವು ಮಗಳನ್ನ ಸ್ಟೇಡಿಯಂ ಗೆ ಕರೆದುಕೊಂಡು ಬರಬಾರದಿತ್ತು, ಈಗ ಮಗುವಿನ ಫೋಟೋ ಎಲ್ಲ ಕಡೆ ವೈರಲ್ ಆದಮೇಲೆ ನಮಗೆ ಗೊತ್ತಿಲ್ಲದೆಯೇ ವಿಡಿಯೋ ಮಾಡಿದ್ರು ಅಂದ್ರೆ ಏನರ್ಥ ಅಂತ ಜನ ಕೇಳ್ತಾ ಇದ್ದಾರೆ. ಆದ್ರೆ ವಿರಾಟ್ ಮತ್ತು ಅನುಶ್ಕ ಫ್ಯಾನ್ಸ್ ಮಾತ್ರ ಮಗಳ ಫೋಟೋವನ್ನ ವೈರಲ್ ಮಾಡಿದ ಮಾಡಿದ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಸಿಟ್ಟಿಗೆದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply