ಮತ್ತೆ ಮಾದಕ ಸುಳಿಯಲ್ಲಿ ಸಿಲುಕಿದ ಅನುಶ್ರೀ!

masthmagaa.com:

ನಟಿ, ಸ್ಟಾರ್‌ ಆಂಕರ್‌ ಅನುಶ್ರಿ ಮತ್ತೊಮ್ಮೆ ಮಾದಕ ಲೋಕದ ಸುಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ಮಂಗಳೂರು ಪೊಲೀಸರು ಸಲ್ಲಿಸಿರೋ ಚಾರ್ಜ್‌ಶೀಟ್‌ನಲ್ಲಿ ಆರೋಪಿ ನಂ2 ಕಿಶೋರ್‌ ಅಮನ್ ಶೆಟ್ಟಿ, ರಿಯಾಲಿಟಿ ಶೋ ಒಂದರ ಕೊರಿಯೋ ಗ್ರಾಫರ್‌ ಆಗಿದ್ದ ತರುಣ್‌ ಮೂಲಕ ಅನುಶ್ರೀ ಪರಿಚಯ ಆಯ್ತು. ಅವ್ರಿಗೆ ತಡಾ ರಾತ್ರಿಯ‘ವರೆಗೆ ಪ್ರಾಕ್ಟೀಸ್‌ ಮಾಡಿಸ್ತಾ ಇದ್ವಿ. ಆ ಸಮಯದಲ್ಲಿ ಅನು ಶ್ರೀ ಪ್ರಾಕ್ಟೀಸ್‌ಗೆ ಬರುವಾಗ ಮಾದಕವಸ್ತು ತರ್ತಾ ಇದ್ರು. ಮಾದಕ ವಸ್ತು ತೊಗೊಂಡ್ರೆ ಡಾನ್ಸ್‌ ಮಾಡಲು ಎನರ್ಜಿ ಸಿಗುತ್ತೆ ಅಂತ ಹೇಳ್ತಿದ್ರು ಅಂತ ಹೇಳಿದ್ದಾರೆ. ಆ ಮಾದಕ ವಸ್ತುವನ್ನ ನಮಗೂ ಕೊಡ್ತಿದ್ರು. ಅವರೂ ತೆಗೆದುಕೊಳ್ತಿದ್ರು. ಅನುಶ್ರಿಗೆ ಡ್ರಗ್ಸ್‌ ಪೆಡ್ಲರ್‌ಗಳ ಪರಿಚಯವಿದೆ. ಡ್ರಗ್ಸ್‌ ಎಲ್ಲಿ ಸಿಗುತ್ತೆ. ಯಾರು ತಂದುಕೊಡ್ತಾರೆ ಅನ್ನೋದೆಲ್ಲಾ ಅವ್ರಿಗೆ ಗೊತ್ತಿತ್ತು. ಪ್ರಕರಣದ ಎ 1 ಆರೋಪಿಯಾಗಿರೋ ತರುಣ್​​​​​​ ಬಾಡಿಗೆ ರೂಮಿನಲ್ಲಿ ಎಲ್ಲರೂ ಪಾರ್ಟಿ ಮಾಡ್ತಿದ್ವಿ ಅಂತ ಕಿಶೋರ್​​​ ಹೇಳಿದ್ದಾರೆ ಅಂತ ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಕಿಶೋರ್ ಮಾತ್ರ, ನಾನ್ ಹಾಗೆ ಹೇಳೇ ಇಲ್ಲ. ಚಾರ್ಜ್​​​​ಶೀಟ್​​ನಲ್ಲಿರೋ ಸೈನೇ ನಂದಲ್ಲ ಅಂತ ಹೇಳಿದ್ದಾರೆ. ಇವೆಲ್ಲದ್ರ ನಡುವೆ ಅನುಶ್ರೀ ಯಾರ ಸಂಪರ್ಕಕ್ಕೂ ಸಿಗದೇ ಮುಂಬೈಗೆ ಹೋಗಿದ್ದಾರೆ ಅಂತ ಮೂಲಗಳು ತಿಳಿಸಿವೆ.

-masthmagaa.com

 

Contact Us for Advertisement

Leave a Reply