ಗರ್ಭಿಣಿ ಮಹಿಳೆಯ ಪ್ರಾಣ ಉಳಿಸಿದ ಆ್ಯಪಲ್‌ ವಾಚ್‌! ಹೇಗೆ?

masthmagaa.om:

ಅಮೆರಿಕದ ಗರ್ಭಿಣಿ ಮಹಿಳೆಯೊಬ್ರು ಆ್ಯಪಲ್‌ ವಾಚ್‌ನಿಂದ ತಮ್ಮ ಪ್ರಾಣ ಉಳಿದಿರೋದಾಗಿ ಹೇಳಿಕೊಂಡಿದ್ದಾರೆ. ಜೆಸ್ಸ್‌ ಕೆಲ್ಲಿ ಅನ್ನೋ ಮಹಿಳೆ ತನ್ನ 9ನೇ ತಿಂಗಳ ಪ್ರೆಗ್ನೆನ್ಸಿ ಟೈಮಲ್ಲಿ ಹಾರ್ಟ್‌ ರೇಟ್‌ ಹೆಚ್ಚಾದ ಸೂಚನೆಯನ್ನ ಆ್ಯಪಲ್‌ ವಾಚ್‌ ನೀಡಿತ್ತು. ನನ್ನ ಹಾರ್ಟ್‌ ಬೀಟ್‌ ನಿಮಿಷಕ್ಕೆ 120ಕ್ಕೂ ಹೆಚ್ಚಿದೆ ಅನ್ನೋ ಮಾಹಿತಿಯನ್ನ ನೀಡಿತ್ತು. ಹೀಗೆ ಎರಡಕ್ಕೂ ಹೆಚ್ಚು ಬಾರಿ ವಾಚ್‌ನಿಂದ ಅಲರ್ಟ್‌ ಬಂದ ನಂತ್ರ ನಾನು ಆಸ್ಪತ್ರೆಗೆ ಹೋದೆ. ಆವಾಗ ಗರ್ಭದಲ್ಲಿನ ಸಮಸ್ಯೆಯಿಂದ ರಕ್ತಸ್ರಾವ ಆಗ್ತಿರೋದು ತಿಳಿದು ಬಂತು ಅಂತ ಕೆಲ್ಲಿ ಹೇಳಿದ್ದಾರೆ. ಅಂದ್ಹಾಗೆ ಘಟನೆ ನಡೆದಿದ್ದು ಡಿಸೆಂಬರ್‌ 17 ರಂದು, ಇದೀಗ ಕೆಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆರೋಗ್ಯವಾಗಿದ್ದಾರೆ. ಜೊತೆಗೆ ಈ ರೀತಿಯ ಆರೋಗ್ಯ ಎಚ್ಚರಿಕೆಗಳನ್ನ ನೆಗ್ಲೆಟ್‌ ಮಾಡಬೇಡಿ ಅಂತ ಕೆಲ್ಲಿ ಎಲ್ಲರಿಗೂ ಮನವಿ ಮಾಡಿದ್ದಾರೆ. ಹಾಗೂ ಈ ಎಚ್ಚರಿಕೆಯಿಂದ ತಮ್ಮ ಹಾಗೂ ಮಗುವಿನ ಜೀವ ಉಳಿಸಿರೋ ಆ್ಯಪಲ್‌ ವಾಚ್‌ಗೆ ಕೃತಜ್ಞತೆ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply