ಕೋವಿಡ್‌ಗೂ ಹೃದಯಾಘತಕ್ಕೂ ಸಂಬಂಧವಿದೆಯಾ? ಕೇಂದ್ರ ಆರೋಗ್ಯ ಸಚಿವರು ಹೇಳಿದ್ದೇನು?

masthmagaa.com:

ಕೊರೊನಾ ವೈರಸ್‌ ರೂಪಾಂತರ ಆಗ್ತಾಯಿದ್ದು, ಭಾರತದಲ್ಲಿ ಇಲ್ಲಿಯವರೆಗೆ 214 ವಿಭಿನ್ನ ರೂಪಾಂತರಗಳು ಕಂಡುಬಂದಿವೆ ಅಂತ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಇತ್ತೀಚಿಗೆ ಏರಿಕೆಯಾಗ್ತಿರುವ ಸೋಂಕನ್ನ ಎದುರಿಸಲು ಸರ್ಕಾರ ಸಿದ್ಧವಾಗಿದೆ. ಐಸಿಯು ಬೆಡ್‌ಗಳು, ಆಮ್ಲಜನಕ ಪೂರೈಕೆ ಮತ್ತು ಇತರ ವ್ಯವಸ್ಥೆಗಳನ್ನ ಮಾಡಿಕೊಂಡಿದ್ದೇವೆ. ಕೋವಿಡ್ ಹೇಗೆ ವರ್ತಿಸುತ್ತೆ ಅನ್ನೋದನ್ನ ನಾವು ಊಹಿಸಲು ಸಾಧ್ಯವಿಲ್ಲ. ಆದರೆ ಈಗ ಹೆಚ್ಚಾಗ್ತಿರುವ ಕೋವಿಡ್‌ ಕೇಸ್‌ಗಳು ಅಷ್ಟೇನು ಅಪಾಯಕಾರಿಯಲ್ಲ ಅಂತ ಮಾಂಡವಿಯಾ ವಿವರಿಸಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಕಳೆದ 24 ಗಂಟೆಯಲ್ಲಿ 711 ಹೊಸ ಪ್ರಕರಣಗಳು ದಾಖಾಲಾಗಿದ್ದು, 4 ಜನ ಮೃತಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply