ಅರ್ಜೆಂಟಿನಾಗೆ ಹೊಸ ಮುಖ್ಯಸ್ಥ: ಯಾರೀ ಡೂಪ್ಲಿಕೇಟ್‌ ಟ್ರಂಪ್?‌

masthmagaa.com:

ಲ್ಯಾಟಿನ್‌ ಅಮೆರಿಕದ ಅರ್ಜೆಂಟಿನಾಗೆ ಡೂಪ್ಲಿಕೇಟ್‌ ಟ್ರಂಪ್‌ ಅಂತಾನೆ ಹೆಸರಾಗಿರೊ ಬಲಪಂಥೀಯ ನಾಯಕ ಜೇವಿಯರ್‌ ಮಿಲೇಯ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲಿನ ಮೂರಂಕಿಯ ಹಣದುಬ್ಬರ, ಭಾರಿ ಬಡತನದಿಂದ ಕಂಗೆಟ್ಟಿರೊ ಜನ ಚೇಂಜ್‌ ಬೇಕು ಅಂತ, ವ್ಯವಸ್ಥೆಯನ್ನೇ ಬದಲಾಯಿಸ್ತೀನಿ ಅಂತ ಹೇಳಿದ್ದ ಈ ಪಾಪುಲಿಸ್ಟ್‌ ಪಕ್ಷದ ನಾಯಕನಿಗೆ ಮೆಜಾರಿಟಿ ನೀಡಿದ್ದಾರೆ. 53 ವರ್ಷದ ಜೇವಿಯರ್‌ ದೇಶದ ಕೇಂದ್ರ ಬ್ಯಾಂಕನ್ನೆ ಮುಚ್ಚಬೇಕು. ದೇಶದ ಎಕನಾಮಿಯನ್ನ ಫುಲ್‌ ಡಾಲರೈಸ್‌ ಮಾಡ್ಬೇಕು ಅಂತ ಹಿಂದೊಮ್ಮೆ ಹೇಳಿಕೆ ನೀಡಿದ್ರು. ಅಲ್ಲದೆ ಅಧಿಕಾರಕ್ಕೆ ಬಂದ್ರೆ ಚೀನಾ, ಬ್ರೆಜಿಲ್ ಜೊತೆಗಿನ ಸಂಬಂಧವನ್ನ ಕಟ್‌ ಮಾಡ್ತೀನಿ ಅಂದಿದ್ರು. ಎಕನಾಮಿಸ್ಟ್‌ ಕೂಡ ಆಗಿರೊ ಇವರು ತಮ್ಮ ಮಿಂಚಿನ ಮಾತು, ಇತಿಹಾಸ ಜ್ಞಾನದ ಭಾಷಣಗಳಿಂದ ದೇಶಾದ್ಯಂತ ಅಲೆ ಎಬ್ಬಿಸಿ ಈಗ ಅಧ್ಯಕ್ಷ ಗಾದಿಗೆ ಏರಿದ್ದಾರೆ.

-masthmagaa.com

Contact Us for Advertisement

Leave a Reply