ಚೀನಾ ಗಡಿಯಲ್ಲಿ ದೇಶೀಯ ಆ್ಯಂಟಿ-ಡ್ರೋನ್‌ ಸಿಸ್ಟಮ್‌ ನಿಯೋಜನೆ!

masthmagaa.com:

ಚೀನಾ ಗಡಿಯಲ್ಲಿ ಭಾರತೀಯ ಸೇನಾ ಶಕ್ತಿ ಹೆಚ್ಚಿಸೋಕೆ ಇದೀಗ ಮೊದಲ ಹಂತದ ದೇಶೀಯ ಆ್ಯಂಟಿ-ಡ್ರೋನ್‌ ಸಿಸ್ಟಮ್‌ಗಳ ನಿಯೋಜನೆ ಮಾಡಲಾಗಿದೆ. ಒಟ್ಟು 7 ನೂತನ ಇಂಡಿಜಿನಸ್‌ ಇಂಟಿಗ್ರೇಟೆಡ್‌ ಡ್ರೋನ್‌ ಡಿಟೆಕ್ಷನ್‌ & ಇಂಟರ್‌ಡಿಕ್ಷನ್‌ ಸಿಸ್ಟಮ್‌ಗಳನ್ನ (IDD&IS) ಚೀನಾ ಗಡಿಯ ಉತ್ತರ ಭಾಗದಲ್ಲಿ ನಿಯೋಜಿಸಲಾಗಿದೆ. ಇದನ್ನ DRDO ಮತ್ತು ಭಾರತ್‌ ಎಲೆಕ್ಟ್ರಾನಿಕ್ಸ್‌ ಸೇರಿ ನಿರ್ಮಾಣ ಮಾಡಿದ್ದು, ಈಗಿರೋ ಕೌಂಟರ್‌ ಡ್ರೋನ್‌ ಸಿಸ್ಟಮ್‌ಗಳಲ್ಲಿ ಇವುಗಳನ್ನ ಆ್ಯಡ್‌ ಮಾಡಲಾಗುತ್ತೆ. ಇವುಗಳ ಸಂಯೋಜಿತ ಸಾಮರ್ಥ್ಯದಿಂದ ಲೋ ರೇಡಾರ್‌ ಕ್ರಾಸ್‌-ಸೆಕ್ಷನ್‌ ಡ್ರೋನ್‌ಗಳು ಮತ್ತು ಇತರೆ UAVಗಳನ್ನ ಪತ್ತೆಹಚ್ಚಿ ನಾಶ ಮಾಡಲಾಗುತ್ತೆ ಅಂತ ಭಾರತೀಯ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply