ಕೇಜ್ರಿವಾಲ್‌ ಆರೋಗ್ಯದಲ್ಲಿ ಏರುಪೇರು, ಜೈಲಿಂದ ಮತ್ತೊಂದು ಆರ್ಡರ್‌!

masthmagaa.com:

ಕಳೆದ ನಾಲ್ಕು ದಿನಗಳಿಂದ ‌ED ಕಸ್ಟಡಿಯಲ್ಲಿರೋ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವ್ರ ಆರೋಗ್ಯದಲ್ಲೀಗ ಏರುಪೇರಾಗಿದೆ. ಅವ್ರ ಬ್ಲಡ್‌ ಶುಗರ್‌ ಲೆವೆಲ್‌ ಕುಸಿದಿದೆ. ಡಾಯಬಿಟಿಸ್‌ ಪೇಶಂಟ್‌ ಆಗಿರೋ ಕೇಜ್ರಿವಾಲ್‌ ಮೇಲೆ CCTV ಮೂಲಕ ನಿಗಾ ವಹಿಸಲಾಗ್ತಿದೆ. ಹೀಗಂತ ಕೆಲ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು.. ಯಾವ್ದೇ ರೀತಿ ಕನ್ಫರ್ಮೇಷನ್‌ ಸಿಕ್ಕಿಲ್ಲ.

ಇನ್ನೊಂದ್ಕಡೆ ಮಾರ್ಚ್‌ 24ರಂದು ಕಸ್ಟಡಿಯಲ್ಲೇ ಇದ್ಕೊಂಡು ಕೇಜ್ರಿವಾಲ್‌ ಅವ್ರು ದೆಹಲಿ ನೀರಿನ ಸಮಸ್ಯೆಗೆ ನಿರ್ದೇಶನ ನೀಡಿ…ತಮ್ಮ ಸಚಿವರಿಗೆ ಪತ್ರ ಬರೆದಿದ್ರು. ಈ ವಿಚಾರವಾಗಿ ED ಅಧಿಕಾರಿಗಳು ತನಿಖೆಗೆ ಮುಂದಾಗಿದ್ರು. ಈಗ ಮತ್ತೊಮ್ಮೆ ಕೇಜ್ರಿವಾಲ್‌ ಕಸ್ಟಡಿಯಲ್ಲೇ ತಮ್ಮ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಇದ್ರಲ್ಲಿ ದೆಹಲಿ ಸರ್ಕಾರದ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಉಚಿತ ಔಷಧಿಗಳು ಮತ್ತು ಪ್ಯಾತಲಾಜಿಕಲ್‌ ಟೆಸ್ಟ್‌ ಲಭ್ಯತೆ ಖಚಿತಪಡಿಸಿಕೊಳ್ಳಿ ಅಂತೇಳಿದ್ದಾರೆ. ಇದನ್ನ ದೆಹಲಿ ಸಚಿವ ಸೌರಭ್‌ ಭಾರದ್ವಾಜ್‌ ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ಓದಿ ಹೇಳಿದ್ದಾರೆ.

ಇನ್ನು ಕೇಜ್ರಿವಾಲ್‌ ಬಂಧನ ವಿಚಾರವಾಗಿ ದೆಹಲಿಯಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ಅತ್ತ ಕೇಜ್ರಿವಾಲ್‌ ಪರ ಆಪ್‌ ನಾಯಕರು ಬೀದಿಗಿಳಿದು ಪ್ರತಿಭಟಿಸ್ತಿದ್ರೆ, ಇತ್ತ ದೆಹಲಿಯ ಬಿಜೆಪಿ ನಾಯಕರು ಕೌಂಟರ್‌ ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯ ಪಟೇಲ್‌ ಚೌಕ್‌ನಲ್ಲಿ ಆಪ್‌ ನಾಯಕರು ಕೇಜ್ರಿವಾಲ್‌ ಬಂಧನ ಖಂಡಿಸಿ ಪ್ರಧಾನಿ ನರೇಂದ್ರ ಮೋದಿಯವ್ರ ನಿವಾಸಕ್ಕೆ ಸುತ್ತುವರಿದು ʻಘೇರಾವ್‌ʼ ಹಾಕಿದ್ದಾರೆ. ಇನ್ನೊಂದ್ಕಡೆ ದೆಹಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್‌ದೇವ ನೇತೃತ್ವದಲ್ಲಿ ಕೇಜ್ರಿವಾಲ್‌ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡ್ಬೇಕು ಅಂತ ಡಿಮಾಂಡ್‌ ಇಟ್ಟು ಪ್ರತಿಭಟಿಸಿದೆ. ಎರಡೂ ಘಟನೆಗಳಲ್ಲಿ ದೆಹಲಿ ಪೊಲೀಸರು ಉಭಯ ಪಕ್ಷಗಳ ಅನೇಕ ಪ್ರತಿಭಟನಾಕಾರರನ್ನ ವಶಕ್ಕೆ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply