ಕೆಲಸ ಮಾಡಿ, ಗೋಧಿ ತಗೊಳ್ಳಿ ಯೋಜನೆ ತಂದ ತಾಲಿಬಾನಿಗಳು!

masthmagaa.com:

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಬಂದ್ಮೇಲೆ ಜನರ ಬಡತನ ಹೆಚ್ಚಾಗ್ತಿದೆ. ಊಟಕ್ಕೂ ಇಲ್ಲದ ಪರಿಸ್ಥಿತಿ ಬಂದಿದೆ. ಹೀಗಾಗಿ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಿ, ಜನರ ಹಸಿವನ್ನು ನೀಗಿಸಲು ತಾಲಿಬಾನಿಗಳು ಹೊಸ ಯೋಜನೆ ಜಾರಿಗೆ ತಂದಿದ್ದಾರೆ. ಕೆಲಸಕ್ಕೆ ಬನ್ನಿ.. ಗೋದಿ ಕೊಡ್ತೀವಿ ಅಂತ ತಾಲಿಬಾನಿಗಳು ಘೋಷಿಸಿದ್ದಾರೆ. ಅಫ್ಘಾನಿಸ್ತಾನದ ಪ್ರಮುಖ ನಗರಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ರಾಜಧಾನಿ ಕಾಬೂಲ್ ಒಂದರಲ್ಲೇ 40 ಸಾವಿರ ಜನರನ್ನು ಕೆಲಸಕ್ಕೆ ಆಹ್ವಾನಿಸಲಾಗಿದೆ. ಈಗಾಗಲೇ ಬಡತನ, ನಿರುದ್ಯೋಗ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕಂಗಾಲಾಗಿರೋ ಅಫ್ಘಾನಿಸ್ತಾನಕ್ಕೆ ಈಗ ಚಳಿಗಾಲ ಕೂಡ ಒಂದು ಸವಾಲಾಗಿ ಪರಿಣಮಿಸಿದೆ. ತಾಲಿಬಾನ್ ಸರ್ಕಾರದ ಈ ಹೊಸ ಯೋಜನೆ ಜನರಿಗೆ ಸಂಬಳ ನೀಡಲ್ಲ. ಬದಲಿಗೆ ಗೋಧಿ ನೀಡಲಿದೆ. ರಾಜಧಾನಿ ಕಾಬೂಲ್ ಒಂದರಲ್ಲೇ 11,600 ಟನ್ ಮತ್ತು ಹೇರತ್, ಜಲಾಲಾಬಾದ್, ಕಂದಹಾರ್ ಸೇರಿದಂತೆ ಉಳಿದ ಪ್ರಾಂತ್ಯಗಳಲ್ಲಿ ಒಟ್ಟು 55000 ಟನ್ ಗೋಧಿ ಹಂಚೋ ಪ್ಲಾನ್ ಮಾಡಿಕೊಳ್ಳಲಾಗಿದೆ. ನೀರಿನ ಕಾಲುವೆ ನಿರ್ಮಾಣ ಸೇರಿದಂತೆ ಶ್ರಮ ವಹಿಸಿ ಮಾಡೋ ಹಲವು ಕೆಲಸಗಳು ಇರಲಿವೆ.

-masthmagaa.com

Contact Us for Advertisement

Leave a Reply