ಏಷ್ಯಾಕಪ್‌: ಪಾಕಿಸ್ತಾನ Vs ನೇಪಾಳ ಪಂದ್ಯದ ವೇಳೆ ಸ್ಟೇಡಿಯಂ ಖಾಲಿ ಖಾಲಿ

masthmagaa.com:

2023ರ 16ನೇ ಆವೃತ್ತಿಯ ಏಷ್ಯಾಕಪ್‌ಗೆ ಚಾಲನೆ ದೊರೆತಿದೆ. ಪಾಕಿಸ್ತಾನದ ಮುಲ್ತಾನ್‌ನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ 2023ರ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಿವೆ, ಆದ್ರೆ ಪಾಕಿಸ್ತಾನ್‌ ತಂಡದ ತವರಿನಲ್ಲಿ ನಡೆಯುತ್ತಿರುವ ಮೊದಲ ಪಂದ್ಯಕ್ಕೆ ಕ್ರಿಕೆಟ್‌ ಪ್ರೇಮಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 15 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಯೋಜನೆಗೊಂಡಿದ್ದು, ಹೀಗಾಗಿ ಸ್ಟೇಡಿಯಂ ತುಂಬಾ ಪ್ರೇಕ್ಷಕರನ್ನು ನಿರೀಕ್ಷಿಸಲಾಗಿತ್ತು. ಅದರಲ್ಲೂ ಉದ್ಘಾಟನಾ ಸಮಾರಂಭ ಇದ್ದಿದ್ದರಿಂದ ಹೆಚ್ಚಿನ ಜನರು ಬರುವ ನಿರೀಕ್ಷೆಯಲ್ಲಿತ್ತು. ಅದ್ರೆ ನಿರೀಕ್ಷೆಯಂತೆ ಪ್ರೇಕ್ಷಕರು ಬರದ ಕಾರಣ ಸ್ಟೇಡಿಯಂನ ಕುರ್ಚಿಗಳು ಖಾಲಿ ಹೊಡಿತಿವೆ. ಇತ್ತ ಸ್ಟೇಡಿಯಂನಲ್ಲಿ ಪ್ರೇಕ್ಷಕರಿಗಿಂದ ಖಾಲಿ ಕರ್ಚಿಗಳೇ ಕಾಣಿಸುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಟ್ರೋಲ್‌ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply