ಅಸ್ಸಾಂ ಸಿಎಂ ವಿರುದ್ದ ಭ್ರಷ್ಟಾಚಾರ ಆರೋಪ! ಆಪ್‌ DCM ವಿರುದ್ದ ಮಾನನಷ್ಟ ಮೊಕದ್ದಮೆ?

mathmagaa.com:

ಭ್ರಷ್ಟಾಚಾರದ ಆರೋಪದ ವಿಚಾರವಾಗಿ ಈಗ AAP ಹಾಗೂ BJP ನಡುವೆ ವಾರ್‌ ಶುರುವಾಗಿದೆ. ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಅವರ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡ್ತಿದ್ದಂತೆ ಅದಕ್ಕೆಲ್ಲಾ ಕೇಂದ್ರ ಸರ್ಕಾರವೇ ಕಾರಣ, ಬಿಜೆಪಿ ನಮ್ಮನ್ನ ಟಾರ್ಗೆಟ್‌ ಮಾಡ್ತಿದೆ ಅಂತ ಆಪ್‌ ವರಿಷ್ಠ ಅರವಿಂದ್‌ ಕೇಜ್ರಿವಾಲ್‌ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ರು. ಇದರ ಬೆನ್ನಲ್ಲೇ ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಹಿಮಾಂತ್‌ ಬಿಸ್ವಾ ಶರ್ಮಾ ವಿರುದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ ಸಿಸೋಡಿಯಾ ಹೊಸ ಆರೋಪ ಮಾಡಿದ್ದಾರೆ. ಅಸ್ಸಾಂ ಸಿಎಂ ಹಾಗೂ ಅವರ ಪತ್ನಿ ರಿನಿಕಿ ಬುಯಾನ್‌ ಶರ್ಮಾ ಕೊರೊನಾ ಸಂದರ್ಭದಲ್ಲಿ PPE ಕಿಟ್‌ ಪೂರೈಕೆ ಮಾಡುವಲ್ಲಿ ಅಕ್ರಮ ಎಸಗಿದ್ದಾರೆ ಅಂತ ಆರೋಪಿಸಿದ್ದಾರೆ. ಸಿಎಂ ಹಿಮಾಂತ್‌ ಅವರ ಪತ್ನಿಯ ಕಂಪನಿ PPE ಕಿಟ್‌ ಪೂರೈಸುವುದಕ್ಕೆ ಸುಮಾರು 990 ರೂಪಾಯಿಗಳ ಚಾರ್ಜ್‌ ಮಾಡಿದೆ. ಆದ್ರೆ ಅದರ ನಿಜವಾದ ಮಾರುಕಟ್ಟೆಯ ಬೆಲೆ ಕೇವಲ 600 ರೂಪಾಯಿ ಮಾತ್ರ. ಈ ಮೂಲಕ ಸಾಕಷ್ಟು ಹಣ ಭ್ರಷ್ಟಾಚಾರ ಮಾಡಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಸೈಲೆಂಟ್‌ ಆಗಿರೋದು ಯಾಕೆ ಅಂತ ಬಿಜೆಪಿ ವಿರುದ್ದ ಕೆಂಡಉಗುಳಿದ್ದಾರೆ. ಈ ಬೆನ್ನಲ್ಲೇ ಅಸ್ಸಾಂ ಸಿಎಂ ಕೂಡ ಪ್ರತಿಕ್ರಿಯೆ ನೀಡಿದ್ದು ಇದು ಆಧಾರವಿಲ್ಲದ ಆರೋಪ ಅಂತ ತಳ್ಳಿಹಾಕಿದ್ದಾರೆ. ಜೊತೆಗೆ ಮನೀಶ್‌ ಸಿಸೋಡಿಯಾ ವಿರುದ್ದ ಮಾನನಷ್ಟ ಕೇಸ್‌ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply