ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ EVM ಸಾಗಿಸಿದ ಚುನಾವಣಾ ಅಧಿಕಾರಿಗಳು!

masthmagaa.com:

ಎರಡನೇ ಹಂತದ ಮತದಾನ ನಡೆದ ಅಸ್ಸಾಂನಲ್ಲಿ ನಿನ್ನೆ ಚುನವಣಾ ಅಧಿಕಾರಿಗಳಿಂದ ದೊಡ್ಡ ಯಡವಟ್ಟಾಗಿದೆ. ಮತದಾನ ಎಲ್ಲಾ ಮುಗಿದ ಮೇಲೆ ಇವಿಎಂ ಅನ್ನ ಬಿಜೆಪಿ ಅಭ್ಯರ್ಥಿಗೆ ಸೇರಿದ ಕಾರಿನಲ್ಲಿ ಸಾಗಿಸಲು ಯತ್ನಿಸಿದ್ದಾರೆ. ವಿಚಾರ ತಿಳಿದ ಬೇರೆ ಪಕ್ಷದವರು ಆ ಕಾರನ್ನ ಅಡ್ಡಗಟ್ಟಿ, ಹಲ್ಲೆ ನಡೆಸಿದ್ದಾರೆ. ಇದು ದೊಡ್ಡ ವಿವಾದ ಆಗ್ತಿದ್ದಂತೇ ನಾಲ್ವರು ಅಧಿಕಾರಿಗಳನ್ನ ಚುನಾವಣಾ ಆಯೋಗ ಅಮಾನತು ಮಾಡಿದೆ. ಜೊತೆಗೆ ಒಂದು ಮತಗಟ್ಟೆಯ ಇವಿಎಂ ಸೀಲ್ ಓಪನ್ ಆಗಿರೋದಕ್ಕೆ ಆ ಮತಗಟ್ಟೆಯಲ್ಲಿ ಮರು ಮತದಾನ ನಡೆಸಲು ಆದೇಶ ಹೊರಡಿಸಿದೆ. ಚುನಾವಣಾ ಆಯೋಗದ ಕಾರು ಹಾಳಾಗಿತ್ತು ಹೀಗಾಗಿ ಅಲ್ಲಿ ಹೋಗ್ತಿದ್ದ ಬೇರೆ ಕಾರಿನಲ್ಲಿ ಡ್ರಾಪ್​ ತಗೊಂಡ್ವಿ. ಆಮೇಲೆ ಅದು ಬಿಜೆಪಿ ಅಭ್ಯರ್ಥಿಗೆ ಸೇರಿದ ಕಾರು ಅನ್ನೋದು ಗೊತ್ತಾಯ್ತು ಅಂತ ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply