ಸತ್ತಿದ್ದ ಮಗು ಮತ್ತೆ ಜೀವಂತ! ಮುಂದೇನಾಯ್ತು ಗೊತ್ತಾ?

masthmagaa:

ಸಾವನ್ನಪ್ಪಿದೆ ಅಂತ ಘೋಷಿಸಿದ್ದ ಮಗು ಅಂತ್ಯ ಕ್ರಿಯೆ ವೇಳೆ ಕಣ್ಣು ತೆರೆದಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. 6 ತಿಂಗಳ ಗರ್ಭಿಣಿ ಮಹಿಳೆಯೊಬ್ಬರು ಅಲ್ಲಿನ ಸಿಲ್ಚಾರ್‌ನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ರು. ಆದ್ರೆ ವೈದ್ಯರು ಮಗು ಜನನದ ವೇಳೆ ತೀರಿಕೊಂಡಿದೆ ಅಂತ ಹೇಳಿದ್ದಾರೆ. ಬಳಿಕ ಮಗುವಿನ ಮೃತದೇಹವನ್ನ ಮನೆಗೆ ತೆಗೆದುಕೊಂಡು ಹೋಗಲಾಗಿದೆ. ಮಗುವಿನ ಶವವನ್ನ ಪ್ಯಾಕೆಟ್‌ನಲ್ಲಿ ಕೊಡಲಾಗಿತ್ತು. ಅಂತಿಮ ಸಂಸ್ಕಾರದ ಮೊದಲು ಪ್ಯಾಕೆಟ್‌ನ್ನ ತೆರೆದಾಗ. ಮಗು ಅಳ್ತಿತ್ತು. ತಕ್ಷಣ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಇದೀಗ ಮಗುವಿಗೆ ಚಿಕಿತ್ಸೆ ನೀಡಲಾಗ್ತಿದೆ ಅಂತ ಹೇಳಲಾಗಿದೆ.

-masthmagaa

Contact Us for Advertisement

Leave a Reply