ನಾಗಾಲ್ಯಾಂಡ್​​​ಗೆ ಅಕ್ರಮವಾಗಿ ಸಾಗಿಸ್ತಿದ್ದ 24 ನಾಯಿಗಳ ರಕ್ಷಣೆ!

masthmagaa.com:

ಈಶಾನ್ಯ ಭಾರತದಲ್ಲಿ ಬರೋ ನಾಗಾಲ್ಯಾಂಡ್​​ಗೆ ಅಕ್ರಮವಾಗಿ ಸಾಗಿಸುತ್ತಿದ್ದ 24 ನಾಯಿಗಳನ್ನ ಅಸ್ಸಾಂ ಪೊಲೀಸರು ರಕ್ಷಣೆ ಮಾಡಿದ್ದಾರೆ. ನಾಯಿಗಳನ್ನ ಗೋಣಿಚೀಲದ ಒಳಗೆ ಹಾಕಿ ಹಗ್ಗದಲ್ಲಿ ಕಟ್ಟಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನ ಅರೆಸ್ಟ್ ಮಾಡಲಾಗಿದೆ. ಅಂದ್ಹಾಗೆ ನಾಗಾಲ್ಯಾಂಡ್​​ನಲ್ಲಿ ಈ ಹಿಂದೆ ನಾಯಿ ಮಾಂಸದ ಮಾರಾಟ, ಸೇವನೆಗೆ ಅವಕಾಶವಿತ್ತು. ಇದಕ್ಕಂತ ಡಾಗ್ ಮಾರ್ಕೆಟ್ ಎಲ್ಲಾ ಇತ್ತು. ಆದ್ರೆ ಕಳೆದ ವರ್ಷದ ಜುಲೈನಲ್ಲಿ ನಾಯಿ ಮಾಂಸ ಮಾರಾಟ, ಅದನ್ನ ಆಮದು ಮಾಡಿಕೊಳ್ಳೋದು, ನಾಯಿಗಳ ವ್ಯಾಪಾರ ಎಲ್ಲವನ್ನ ಬ್ಯಾನ್ ಮಾಡಿತ್ತು ನಾಗಾಲ್ಯಾಂಡ್​ ಸರ್ಕಾರ. ಇದರ ನಂತ್ರ ಕದ್ದುಮುಚ್ಚಿ ನಾಯಿ ಮಾರಾಟ ದಂಧೆ ನಡೀತಿದೆ. ಈಗ ಅಸ್ಸಾಂನಲ್ಲಿ 24 ನಾಯಿಗಳನ್ನ ರಕ್ಷಿಸಲಾಗಿದೆ.

-masthmagaa.com

Contact Us for Advertisement

Leave a Reply