ಯೆಮನ್​ನಲ್ಲಿ ಸೌದಿ ಏರ್​ಸ್ಟ್ರೈಕ್​​! 130 ಹೌತಿ ಬಂಡುಕೋರರು ಸಾವು!

masthmagaa.com:

ಯೆಮನ್​​ನಲ್ಲಿ ಸೌದಿ ಅರೇಬಿಯಾ ನೇತೃತ್ವದದಲ್ಲಿ ನಡೆದ ಏರ್​ಸ್ಟ್ರೈಕ್ ಕಾರ್ಯಾಚರಣೆಯಲ್ಲಿ 130 ಮಂದಿ ಹೌತಿ ಬಂಡುಕೋರರು ಪ್ರಾಣ ಕಳ್ಕೊಂಡಿದ್ದಾರೆ. ಮಾರಿಬ್​ ಪ್ರಾಂತ್ಯದಲ್ಲಿ ಹೌತಿಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಕಳೆದ ತಿಂಗಳು ಮಾರಿಬ್ ಪ್ರಾಂತ್ಯವನ್ನು ವಶಕ್ಕೆ ಪಡೆಯಲು ಹೌತಿಗಳು ಯತ್ನಿಸುತ್ತಿದ್ದು, ನಿರಂತರವಾಗಿ ಸಂಘರ್ಷ ನಡೆಯುತ್ತಲೇ ಇದೆ. ಕಳೆದೊಂದು ತಿಂಗಳಲ್ಲಿ ನೂರಾರು ಹೌತಿ ಬಂಡುಕೋರರು ಮತ್ತು ಯೆಮನ್ ಸರ್ಕಾರ ಬೆಂಬಲಿತ ಜನ ಪ್ರಾಣ ಕಳ್ಕೊಂಡಿದ್ದಾರೆ. ಮಾರಿಬ್​ನ ಅಬ್ದಿಯಾದಲ್ಲಿ ನಿರಂತರ ಏರ್​ಸ್ಟ್ರೈಕ್ ನಡೆಸುತ್ತಿದ್ದು, ನಿನ್ನೆ 150 ಮಂದಿ ಮತ್ತು ಇವತ್ತು 134 ಮಂದಿ ಪ್ರಾಣ ಬಿಟ್ಟಿದ್ದಾರೆ ಅಂತ ಸೌದಿ ನೇತೃತ್ವದ ಸೇನಾ ಒಕ್ಕೂಟ ಮಾಹಿತಿ ನೀಡಿದೆ. ಇದ್ರ ನಡುವೆಯೇ ಹೌತಿ ಬಂಡುಕೋರರು ಮಾರಿಬ್​ ಪ್ರಾಂತ್ಯದ ಅಲ್ ಜಾವ್​​​ಬಾಹ್​​ ಜಿಲ್ಲೆಯನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿ 2014ರಿಂದಲೂ ನಾಗರಿಕ ಯುದ್ಧ ನಡೀತಾನೇ ಇದೆ. ಕಳೆದ 7 ವರ್ಷಗಳಲ್ಲಿ ಸಾವಿರಾರು ಜನ ಪ್ರಾನ ಕಳ್ಕೊಂಡಿದ್ದು, ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಯೆಮನ್ ಸರ್ಕಾರಕ್ಕೂ ಹೌತಿಗಳಿಗೂ ಆಗಿ ಬರೋದಿಲ್ಲ. ಹೌತಿಗಳು ಇರಾನ್ ಬೆಂಬಲದಿಂದ ಯೆಮನ್​ನಲ್ಲಿ ಅಧಿಕಾರ ವಶಕ್ಕೆ ಪಡೆಯಲು ಯತ್ನಿಸುತ್ತಿದ್ರೆ, ಯೆಮನ್ ಸರ್ಕಾರಕ್ಕೆ ಸೌದಿ ನೇತೃತ್ವದ ಸೇನಾ ಒಕ್ಕೂಟ ಬೆಂಬಲ ನೀಡ್ತಾ ಬಂದಿದೆ.

-masthmagaa.com

Contact Us for Advertisement

Leave a Reply