ಅಮೆರಿಕದಲ್ಲಿ 40 ಭಾರತೀಯರು ಸಾವು.. ಕೇರಳದವರೇ ಹೆಚ್ಚು..!

masthmagaa.com:

ಕೊರೋನಾ ವೈರಸ್​ಗೆ ಅಮೆರಿಕದಲ್ಲಿ 40ಕ್ಕೂ ಹೆಚ್ಚು ಭಾರತೀಯರು ಹಾಗೂ ಅನಿವಾಸಿ ಭಾರತೀಯರು ಮೃತಪಟ್ಟಿದ್ದಾರೆ. ಜೊತೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ ಅಂತ ಅಲ್ಲಿರುವ ಭಾರತೀಯ ಸಮುದಾಯದ ಮುಖಂಡರು ಮಾಹಿತಿ ನೀಡಿದ್ದಾರೆ.

ಈ ಕಾಯಿಲೆ ಕಾಟಕ್ಕೆ ನಲುಗಿ ಹೋಗಿರೋ ಅಮೆರಿಕದಲ್ಲಿ 18 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 5 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಿದೆ. ನ್ಯೂಯಾರ್ಕ್​ ಒಂದರಲ್ಲೇ 1.60 ಲಕ್ಷ ಮಂದಿಗೆ ಕೊರೋನಾ ವೈರಸ್ ತಗುಲಿದ್ದು, 7 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ ನ್ಯೂಜೆರ್ಸಿ, ಇಲ್ಲಿನಾಯ್ಸ್, ಚಿಕಾಗೋ, ವಾಷಿಂಗ್ಟನ್​ಗಳಲ್ಲಿ ಹೆಚ್ಚು ಸಾವು ನೋವು ಸಂಭವಿಸಿದೆ. ಅದ್ರಲ್ಲೂ ನ್ಯೂಯಾರ್ಕ್​ ಹಾಗೂ ನ್ಯೂಜೆರ್ಸಿಯಲ್ಲಿ ಭಾರತೀಯರು ಹೆಚ್ಚು ವಾಸವಿದ್ದಾರೆ.

ಅಮೆರಿಕದಲ್ಲಿ ಮೃತಪಟ್ಟ ಭಾರತೀಯರಲ್ಲಿ ಕೇರಳದವರೇ 17 ಮಂದಿ ಇದ್ದಾರೆ. ಉಳಿದಂತೆ ಗುಜರಾತ್​ನ 10, ಪಂಜಾಬ್​ನ ನಾಲ್ವರು, ಆಂಧ್ರದ ಇಬ್ಬರು ಹಾಗೂ ಒಡಿಶಾದ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. 21 ವರ್ಷದ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ 60 ವರ್ಷ ಮೇಲ್ಪಟ್ಟವರು ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply