ಆಸ್ಟ್ರೇಲಿಯಾ ಪತ್ರಕರ್ತೆಯ ಆರೋಪ ನಿರಾಕರಿಸಿದ ಭಾರತ!

masthmagaa.com:

ಆಸ್ಟ್ರೇಲಿಯಾ ಮೂಲದ ABC Tv ಯ ಪತ್ರಕರ್ತೆ ಅವನಿ ಡಾಯಸ್‌ಗೆ ಭಾರತದಲ್ಲಿನ ಚುನಾವಣೆ ಕವರ್‌ ಮಾಡೋಕೆ ಭಾರತ ಸರ್ಕಾರ ಬಿಟ್ಟಿಲ್ಲ….ಅಂತ ಆರೋಪಿಸಲಾಗಿತ್ತು. ಬ್ರಿಟನ್‌ನ ʻ ಗಾರ್ಡಿಯನ್‌ʼ ಪತ್ರಿಕೆ ಈ ಬಗ್ಗೆ ರಿಪೋರ್ಟ್‌ ಮಾಡಿತ್ತು. ಇದಕ್ಕೆ ಕೇಂದ್ರ ಸರ್ಕಾರ ರಿಯಾಕ್ಟ್‌ ಮಾಡಿ ಆರೋಪಗಳನೆಲ್ಲಾ ನಿರಾಕರಿಸಿದೆ. ʻಅವನಿ ಡಾಯಸ್‌ ಅವ್ರು ಇತ್ತೀಚಿನ ʻಫಾರೀನ್‌ ಕರೆಸ್ಪಾಂಡೆಂಟ್‌ʼ ಅನ್ನೋ ತಮ್ಮ ಯುಟ್ಯೂಬ್‌ ಎಪಿಸೋಡ್‌ನಲ್ಲಿ ತಪ್ಪು ಕಾಂಟೆಂಟ್‌ ಪಬ್ಲಿಷ್‌ ಮಾಡಿ… ಲಿಮಿಟ್‌ ಕ್ರಾಸ್‌ ಮಾಡಿದ್ದಾರೆ. ನಮ್ಮ ವೀಸಾ ನಿಯಮಗಳನ್ನ ಉಲ್ಲಂಘಿಸಿದ್ದಾರೆʼ ಅಂತ ಭಾರತದ ವಿದೇಶಾಂಗ ವ್ಯವಹಾರಗಳ ಅಧಿಕಾರಿ ಹೇಳಿದ್ದಾರೆ

-masthmagaa.com

Contact Us for Advertisement

Leave a Reply