ಭಾರತದ ಆತಿಥ್ಯ ತುಂಬಾ ಚೆನ್ನಾಗಿದೆ: ಪಾಕ್‌ ಆಟಗಾರರು

masthmagaa.com:

ಭಾರತದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಿದ್ದು, ಆಟಗಾರರನ್ನ ಭರ್ಜರಿಯಾಗಿ ವೆಲ್‌ಕಮ್‌ ಮಾಡಲಾಗಿದೆ. ಹೈದರಾಬಾದ್‌ನಲ್ಲಿ ಪಾಕಿಸ್ತಾನ ಆಟಗಾರರಿಗೆ ಸಿಕ್ಕ ಅದ್ಧೂರಿ ಸ್ವಾಗತವನ್ನ ಸ್ವತಃ ಪಾಕಿಸ್ತಾನ ಆಟಗಾರರೇ ಹಾಡಿ ಹೊಗಳಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿರುವ ಪಾಕ್‌ ತಂಡದ ಕ್ಯಾಪ್ಟನ್‌ ಬಾಬರ್‌, ಹೈದರಾಬಾದ್‌ನಲ್ಲಿ ಪ್ರೀತಿ ಮತ್ತು ಬೆಂಬಲದಿಂದ ಮುಳುಗಿ ಹೋಗಿದ್ದೀನಿ, ಸಖತ್‌ ಖುಷಿಯಾಗಿದೆ ಅಂತ ಬರೆದುಕೊಂಡಿದ್ದಾರೆ. ಜೊತೆಗೆ ಶಾಹೀನ್‌ ಅಫ್ರಿದಿ ಕೂಡ ಪೋಸ್ಟ್‌ ಹಾಕಿದ್ದು, ಗ್ರೇಟ್‌ ವೆಲ್‌ಕಮ್‌ ಅಂತ ಬರೆದುಕೊಂಡಿದ್ದಾರೆ. ಅತ್ತ ಮುಹಮ್ಮದ್‌ ರಿಜ್ವಾನ್‌ Xಲ್ಲಿ ಪೋಸ್ಟ್‌ ಹಾಕಿದ್ದು, ಇಲ್ಲಿನ ಜನರಿಂದ ಅದ್ಭುತ ಸ್ವಾಗತ ಸಿಕ್ಕಿದೆ. ಇಲ್ಲಿಯವರೆಗೂ ಎಲ್ಲವೂ ಸೂಪರ್‌ ಸ್ಮೂತ್‌ ಆಗಿದ್ದು, ಮುಂದಿನ ಒಂದೂವರೆ ತಿಂಗಳಿಗಾಗಿ ಎದುರು ನೋಡುತ್ತಿದ್ದೇನೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply