ಧೃವ ಸರ್ಜಾ ಮನೆಗೆ ಮಗುವಿನ ಆಗಮನ !

masthmagaa.com:

ಇಂದು ಸೆಪ್ಟೆಂಬರ್‌ 18 ಉಪೇಂದ್ರ, ವಿಷ್ಣುವರ್ಧನ್‌, ಶೃತಿ ಅವರ ಬರ್ತ್‌ಡೇ ಕೂಡ ಇದೆ. ಹಾಗೇನೆ ಗಣೇಶ ಚತುರ್ಥಿ ಕೂಡ ಹೌದು. ಇಂತಹ ಒಂದು ಶುಭ ಸಂದರ್ಭದಲ್ಲಿ ಧೃವ ಸರ್ಜಾ ಅವರ ಕುಟುಂಬಕ್ಕೆ ಮತ್ತೊಂದು ಗುಡ್‌ ನ್ಯೂಸ್‌ ಬಂದಿದೆ. ಧೃವ ಸರ್ಜಾ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನ ಆಗಿದೆ.

ಧ್ರುವ ಸರ್ಜಾ ಹಾಗೂ ಪ್ರೇರಣಾ 2019ರಲ್ಲಿ ಮದುವೆ ಆಗಿದ್ರು. ಕಳೆದ ವರ್ಷ ಅಕ್ಟೋಬರ್​ 2ರಂದು ಧ್ರುವ ಸರ್ಜಾಗೆ ಹೆಣ್ಣು ಮಗು ಜನಿಸಿತ್ತು. ಈಗ ಅವರು ಮತ್ತೊಮ್ಮೆ ತಂದೆ ಆಗಿದ್ದಾರೆ. ಈ ವಿಚಾರವನ್ನು ತಮ್ಮ ಅಭಿಮಾನಿಗಳ ಜೊತೆ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. “ನನಗೆ ಮತ್ತೊಮ್ಮೆ ಮಗ ಹುಟ್ಟಿದ್ದಾನೆ ” ಅಂತ ಬರೆದು ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply