ಭಾರತ ಹೊಸ ವರ್ಷನ್‌ನ ಮೀಡಿಯಮ್‌ ರೇಂಜ್‌ನ ಮಿಸೈಲ್‌ ಟೆಸ್ಟ್‌ ಸಕ್ಸಸ್!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತ ಹೊಸ ವರ್ಷನ್‌ನ ಮೀಡಿಯಮ್‌ ರೇಂಜ್‌ನ ಮಿಸೈಲ್‌ವೊಂದನ್ನ ಯಶಸ್ವಿಯಾಗಿ ಟೆಸ್ಟ್‌ ಮಾಡಿದೆ. ಈ ಬಗ್ಗೆ ಸ್ವತಃ ರಕ್ಷಣಾ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ. ʻಏಪ್ರಿಲ್‌ 23ರಂದು ಸ್ಟ್ರಾಟರ್ಜಿಕ್‌ ಪೋರ್ಸ್‌ ಕಮಾಂಡ್‌ ಆಶ್ರಯದಲ್ಲಿ ಈ ಹೊಸ ಆವೃತ್ತಿಯ ಮೀಡಿಯಮ್‌ ರೇಂಜ್‌ ಬ್ಯಾಲಸ್ಟಿಕ್‌ ಮಿಸೈಲ್‌ನ್ನ ಪರೀಕ್ಷೆ ಮಾಡಲಾಗಿದೆ. ಹೊಸ ಟೆಕ್ನಾಲಜಿಯೊಂದಿಗೆ ಅಭಿವೃದ್ದಿಪಡಿಸಲಾದ ಈ ಮಿಸೈಲ್‌, ಭಾರತದ ಸ್ಟ್ರಾಟಜಿಕ್‌ ಫೋರ್ಸ್‌ ಕಮಾಂಡ್‌ನ (SPF) ಸಾಮರ್ಥ್ಯ ಹೆಚ್ಚಿಸೋಕೆ ಸಹಾಯವಾಗಿದೆ. ಸುಮಾರು 250ಕ್ಕೂ ಅಧಿಕ ಕಿಮೀ ದೂರದಲ್ಲಿರೋ ಟಾರ್ಗೆಟ್‌ಗಳನ್ನ ಬಹಳ ಈಸಿಯಾಗಿ ಹೊಡೆದುರುಳಿಸುತ್ತೆʼ ಅಂತ ಡಿಫೆನ್ಸ್‌ ಮಿನಿಸ್ಟ್ರಿ ತಿಳಿಸಿದೆ.

-masthmagaa.com

Contact Us for Advertisement

Leave a Reply