ಯುಕ್ರೇನ್‌ ಸೇರಿದಂತೆ ಇಸ್ರೇಲ್‌, ತೈವಾನ್‌ ನೆರವಿಗೆ ಅಮೆರಿಕ ಸಜ್ಜು!

masthmagaa.com:

ರಷ್ಯಾ ಜೊತೆಗಿನ ಯುದ್ದದಲ್ಲಿ ಮತ್ತೆ ಅಮೆರಿಕ ಯುಕ್ರೇನ್‌ಗೆ ನೆರವು ನೀಡೊಕೆ ಮುಂದಾಗಿದೆ. ಹೌದು ಅಮೆರಿಕನ್‌ ಸಂಸತ್‌ನಲ್ಲಿ ಯುಕ್ರೇನ್‌ಗೆ ನೆರವು ನೀಡೊ ಸಂಬಂಧ 61 ಬಿಲಿಯನ್‌ ಡಾಲರ್‌ ಅಂದ್ರೆ 5 ಲಕ್ಷ 6 ಸಾವಿರ ಕೋಟಿ ರೂಪಾಯಿ ಭಾರಿ ಮೊತ್ತದ ಬಿಲ್‌ವೊಂದು ಪಾಸ್‌ ಆಗಿದೆ. ಈ ಮೂಲಕ ಕಳೆದ ಆರು ತಿಂಗಳಿನಿಂದ ಯುಕ್ರೇನ್‌ಗೆ ನೆರವು ನೀಡೊ ವಿಚಾರದಲ್ಲಿ ಅಮೆರಿಕನ್‌ ರಾಜಕೀಯದಲ್ಲಿ ಭುಗಿಲೆದ್ದಿದ್ದ ಬಿಕ್ಕಟ್ಟು ಈಗ ಶಮನವಾದಂತಾಗಿದೆ. ಯುಕ್ರೇನ್‌ಗೆ 61 ಬಿಲಿಯನ್‌ ಡಾಲರ್‌ ಸೇರಿದಂತೆ ಇಸ್ರೇಲ್‌ ಹಾಗೂ ತೈವಾನ್‌ಗಳಿಗೂ ನೆರವು ನೀಡಲು ಅಮೆರಿಕನ್‌ ಸಂಸತ್‌ನಲ್ಲಿ ಒಟ್ಟು 95 ಬಿಲಿಯನ್‌ ಡಾಲರ್‌ ಅಂದ್ರೆ 7ಲಕ್ಷ 88ವರೆ ಸಾವಿರ ಕೋಟಿ ರೂಪಾಯಿ ಬೃಹತ್‌ ವೆಚ್ಚದ ಬಿಲ್‌ ಕೂಡ ಪಾಸ್‌ ಆಗಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply