ಮೈದಾನದಲ್ಲಿ ಕಾಮಿಡಿಗೆ ತುತ್ತಾದ ಸೌತ್ ಆಫ್ರಿಕಾ..!

ಭಾರತ-ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ವಿಶಾಖಪಟ್ಟಣನಲ್ಲಿ ನಡೆಯುತ್ತಿದೆ. ನಿನ್ನೆ ಪಂದ್ಯದ ವೇಳೆ ಒಂದು ಕಾಮಿಡಿ ಘಟನೆ ನಡೀತು. ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡ್ತಿದ್ರು. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ ಎಸೆದ ಬಾಲ್ ಹಿಡಿಯುವಲ್ಲಿ ಕೀಪರ್ ಡಿಕಾಕ್ ವಿಫಲವಾದ್ರು. ಬಾಲ್ ಸೀದಾ ಬೌಂಡರಿ ಲೈನ್‍ಗೆ ಹೋಯ್ತು. ಭಾರತಕ್ಕೆ 4 ರನ್ ಬಂತು. ಆದ್ರೆ ಬೌಂಡರಿ ಲೈನ್ ತಲುಪಿದ ಸೌತ್ ಆಫ್ರಿಕಾ ಆಟಗಾರರು ಎಷ್ಟೇ ಹುಡುಕಿದ್ರೂ ಬಾಲ್ ಸಿಗಲೇ ಇಲ್ಲ. ಬಾಲ್ ಬೌಂಡರಿ ಲೈನ್‍ನಲ್ಲಿ ಕಾಣುತ್ತಿದ್ದರೂ, ಬಾಲ್‍ಗಾಗಿ ಹುಡುಕಾರಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗ್ತಿದ್ದು, ನೆಟ್ಟಿಗರು ಹರಿಣಗಳ ಕಾಲೆಳೆದಿದ್ದಾರೆ.

ಸದ್ಯ 2ನೇ ದಿನದಾಟದಂತ್ಯಕ್ಕೆ ಸೌತ್ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 39 ರನ್ ಕಲೆಹಾಕಿದ್ದು, 463 ರನ್‍ಗಳ ಹಿನ್ನಡೆ ಅನುಭವಿಸಿದೆ.

Contact Us for Advertisement

Leave a Reply