ಬಾಂಗ್ಲಾದೇಶದಲ್ಲಿ ಮುಂದುವರಿದ ಕೋಮು ಕೋಲಾಹಲ!

masthmagaa.com:

ಬಾಂಗ್ಲಾದೇಶದಲ್ಲಿ ದುರ್ಗಾಪೂಜೆಯ ವೇಳೆ ಶುರುವಾದ ಹಿಂಸಾಚಾರ ನಿಲ್ಲೋ ಲಕ್ಷಣವೇ ಕಾಣಿಸುತ್ತಿಲ್ಲ.. ರಂಗ್​ಪುರ್ ಅನ್ನೋ ನಗರದಲ್ಲಿ ದುಷ್ಕರ್ಮಿಗಳು ಹಿಂದೂ ಸಮುದಾಯಕ್ಕೆ ಸೇರಿದ 20 ಮನೆಗಳನ್ನು ಸುಟ್ಟು ಭಸ್ಮ ಮಾಡಿದ್ದಾರೆ. ಹಿಂದೂ ಸಮುದಾಯದ ಯುವಕನೊಬ್ಬ ಫೇಸ್​ಬುಕ್​ನಲ್ಲಿ ಒಂದು ಪೋಸ್ಟ್ ಹಾಕಿದ್ದ. ಇದು ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಅಂತ ವಿರೋಧ ವ್ಯಕ್ತವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಯುವಕನ ಪೋಸ್ಟ್​ ವೈರಲ್ ಆಗ್ತಿದ್ದಂತೆ ಪೊಲೀಸರು ಆತನ ಮನೆಗೆ ರಕ್ಷಣೆ ನೀಡಿದ್ರು. ಆದ್ರೆ ಉದ್ರಿಕ್ತರ ಗುಂಪು ಯುವಕ ಮಾಡಿದ ತಪ್ಪಿಗೆ ನೆರೆಹೊರೆಯವರ ಮೇಲೆ ಸಿಟ್ಟು ತೀರಿಸಿಕೊಂಡಿದ್ದಾರೆ. ಮನೆಗಳಿಗೆ ಬೆಂಕಿ ಇಟ್ಟಿದ್ದಾರೆ. ಪುಣ್ಯಕ್ಕೆ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ. ಅಂದಹಾಗೆ ಬುಧವಾರ ದುರ್ಗಿ ಪೂಜೆ ವೇಳೆ ದೇವಿಯ ಮೂರ್ತಿಯ ಕಾಲ ಬಳಿ ಕುರಾನ್ ಇಟ್ಟಿರೋ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಇಲ್ಲಿ ನಿರಂತರ ಹಿಂಸಾಚಾರ ನಡೀತಾನೇ ಇದೆ. ದುಷ್ಕರ್ಮಿಗಳು ಒಂದರ ನಂತರ ಒಂದರಂತೆ ಹಲವು ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾರೆ. ಈವರೆಗೆ ಹಿಂಸಾಚಾರದಲ್ಲಿ 6 ಮಂದಿ ಪ್ರಾಣ ಕಳ್ಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಬಾಂಗ್ಲಾದೇಶ ಗೃಹಸಚಿವ ಅಸಾದುಜ್ಜಾಮನ್ ಖಾನ್​​, ದುರ್ಗಾಪೂಜೆ ವೇಳೆ ನಡೆದ ದಾಳಿಗಳು ಪೂರ್ವ ನಿಯೋಜಿತ.. ಫುಲ್ ಪ್ಲಾನ್ ಮಾಡಿಕೊಂಡೇ ದಾಳಿ ನಡೆಸಲಾಗಿದೆ. ದೇಶದಲ್ಲಿ ಕೋಮುಸೌಹಾರ್ಧ ನಾಶಪಡಿಸೋದೇ ಇದ್ರ ಉದ್ದೇಶ ಅಂತ ಹೇಳಿದ್ದಾರೆ. ಜೊತೆಗೆ ದಾಳಿ ಸಂಬಂಧ ಎಲ್ಲಾ ರೀತಿಯ ಸಾಕ್ಷ್ಯ ಸಂಗ್ರಹಿಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತೆ. ಕೋಮು ಸೌಹಾರ್ಧ ಹಾಳು ಮಾಡಲು ಯಾರೆಲ್ಲಾ ಪ್ರಯತ್ನಿಸುತ್ತಿದ್ದಾರೋ ಅವರು ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಾಣೋದಿಲ್ಲ ಅಂತ ಕೂಡ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply