ಕೆಲಸ ಇರೋ ಹುಡುಗ, ಹುಡುಗಿ ಮದ್ವೆಯಾಗಬಾರದು: ಬಾಂಗ್ಲಾ ಸಂಸದನ ಪ್ರಸ್ತಾವನೆ

masthmagaa.com:

ಬಾಂಗ್ಲಾದೇಶದಲ್ಲಿ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಪಕ್ಷೇತರ ಸಂಸದ ರೆಝೌಲ್ ಕರೀಂ ಹೊಸ ಐಡಿಯಾ ಕಂಡು ಹಿಡಿದಿದ್ದಾರೆ. ದೇಶದಲ್ಲಿ ಕೆಲಸ ಮಾಡುವ ಜೋಡಿಗೆ ಮದುವೆಯಾಗೋದನ್ನು ಬ್ಯಾನ್ ಮಾಡೋ ಕಾನೂನಿನ ಬಗ್ಗೆ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಹೀಗೆ ಕೆಲಸ ಇರುವ ಹುಡುಗ, ಕೆಲಸ ಇರುವವರನ್ನೇ ಮದುವೆಯಾಗೋ ಟ್ರೆಂಡ್ ಕಂಟಿನ್ಯೂ ಆದ್ರೆ, ನಿರುದ್ಯೋಗ ಸಮಸ್ಯೆ ಪರಿಹಾರ ಆಗಲ್ಲ. ಗಂಡ-ಹೆಂಡತಿ ಇಬ್ಬರು ಕೆಲಸ ಮಾಡೋದ್ರಿಂದ ಮಕ್ಕಳು ಕೂಡ ಮನೆಯಲ್ಲಿ ಹಿಂಸೆ ಅನುಭವಿಸ್ತಾರೆ ಅಂತ ಕರೀಂ ಹೇಳಿದ್ದಾರೆ. ಆದ್ರೆ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು, ಪ್ರಸ್ತಾವನೆ ತಿರಸ್ಕರಿಸಲಾಗಿದೆ.

-masthmagaa.com

Contact Us for Advertisement

Leave a Reply