ಅನುಮತಿ ಇಲ್ದೇ ರಸ್ತೆ ಅಗೆಯೋ ಸಂಸ್ಥಗೆಳಿಗೆ 25 ಲಕ್ಷ ರೂ. ದಂಡ: ಬಿಬಿಎಂಪಿ

masthmagaa.com:

ಅನುಮತಿ ಇಲ್ದೇ ರಸ್ತೆಗಳನ್ನ ಅಗೆಯುವ ಸಂಸ್ಥೆಗಳಿಗೆ 25 ಲಕ್ಷ ರೂಪಾಯಿ ದಂಡ ಹಾಗೂ ವ್ಯಕ್ತಿಗಳಿಗೆ 10 ಲಕ್ಷ ರೂಪಾಯಿ ದಂಡ ವಿಧಿಸೋದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಬಿಬಿಎಂಪಿ ಅನುಮತಿ ಇಲ್ದೇ ರಸ್ತೆ ಅಗೆದ್ರೆ ಸರ್ಕಾರಿ ಕಂಪನಿಗಳಾದ್ರೂ ಸರಿ ದಂಡ ಕಟ್ಟಬೇಕು ಅಂತ ಬಿಬಿಎಂಪಿಯ ಮುಖ್ಯ ಇಂಜಿನಿಯರ್‌ ಬಿಎಸ್‌ ಪ್ರಹ್ಲಾದ್‌ ಹೇಳಿದ್ದಾರೆ. ಜೊತೆಗೆ ಬಹುತೇಕ ರಸ್ತೆ ಗುಂಡಿಗಳನ್ನ ರಿಪೇರಿ ಮಾಡಲಾಗಿದೆ. ಉಳಿದಿರೊ ಗುಂಡಿಗಳನ್ನ ಕೂಡ ಬೇಗನೇ ಮುಚ್ಚಲಾಗುತ್ತೆ. ಎಲ್ಲ ರಸ್ತೆಗಳನ್ನ ಪರಿಶೀಲನೆ ಮಾಡಲಾಗುತ್ತೆ ಅಂತ ಪ್ರಹ್ಲಾದ್‌ ಹೇಳಿದ್ದಾರೆ. ಅಂದ್ಹಾಗೆ ಸೆಪ್ಟಂಬರ್‌ನಲ್ಲಿ ಜಿಯೋ ಡಿಜಿಟಲ್‌ ಫೈಬರ್‌ ಪ್ರೈವೇಟ್‌ ಲಿಮಿಟೆಡ್‌, ಭಾರ್ತಿ ಏರ್ಟೆಲ್‌, ಟೆಲಿಸಾನಕ್ ನೆಟ್‌ವರ್ಕ್ಸ್‌ ಮತ್ತು VAC ಟೆಲಿಇನ್‌ಫ್ರಾ ಸಲ್ಯುಷನ್‌ ಸಂಸ್ಥೆಗಳಿಗೆ ಅನುಮತಿ ಇಲ್ದೆ ರೋಡ್‌ಗಳನ್ನ ಅಗೆದು ಟೆಲಿಕಾಮ್‌ ಟವರ್‌ಗಳನ್ನ ಹಾಕಿದ್ದಕ್ಕೆ ಬಿಬಿಎಂಪಿ ತಲಾ 20 ಲಕ್ಷ ರೂಪಾಯಿ ದಂಡ ವಿಧಿಸಿತ್ತು.

-masthmagaa.com

Contact Us for Advertisement

Leave a Reply