ICC ವರ್ಲ್ಡ್‌ಕಪ್:‌ ಆಟಕ್ಕಿಂತ ಮಾರ್ಕೆಟಿಂಗ್‌ಗೇ ಹೆಚ್ಚಿನ ಹಣ ಹರಿವು

masthmagaa.com:

2023ರಲ್ಲಿ ಭಾರತದಲ್ಲಿ ನಡೆದ ICC ಒಡಿಐ ವಿಶ್ವಕಪ್‌ನಲ್ಲಿ BCCI ಅತಿ ಹೆಚ್ಚು ಪೇಮೆಂಟನ್ನ ಮಾರ್ಕೆಟಿಂಗ್‌ ಕಂಪನಿಗಳು, ಏರ್‌ಲೈನ್ಸ್‌ ಹಾಗೂ ಹೋಟೆಲ್‌ಗಳಿಗೆ ಕೊಟ್ಟಿದೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಅದ್ರಲ್ಲೂ ಸ್ಪೋರ್ಟ್ಸ್‌ ಮಾರ್ಕೆಟಿಂಗ್‌ ಹಾಗೂ ಮ್ಯಾನೇಜ್‌ಮೆಂಟ್‌ ಕಂಪನಿ `21st ಸೆಂಚುರಿ ಮೀಡಿಯಾ’ ಬರೋಬ್ಬರಿ 39 ಕೋಟಿ ರೂಪಾಯಿ ಪೇಮೆಂಟ್‌ ಪಡೆದಿದೆ. ಇದ್ರಲ್ಲಿ 3.4 ಕೋಟಿ ಫೈನಲ್‌ ಪಂದ್ಯದ ಇನ್ನಿಂಗ್ಸ್‌ ಮಧ್ಯದ ಕಾರ್ಯಕ್ರಮಕ್ಕಾಗೆ ಖರ್ಚಾಗಿದೆ. ಎರಡನೇ ಸ್ಥಾನದಲ್ಲಿ ಮೀಡಿಯಾ ಇನ್ವೆಸ್ಟ್‌ಮೆಂಟ್‌ ಕಂಪನಿ 23.47 ಕೋಟಿ, ವಿಸ್ತಾರ ಏರ್‌ಲೈನ್ಸ್‌ಗೆ 8, ITC ಹೋಟೆಲ್‌ಗೆ 2.5 ಕೋಟಿ ಸೇರಿದಂತೆ, ಎಲ್ಲಾ ಖರ್ಚು ವೆಚ್ಚಗಳ ಡೇಟಾವನ್ನ BCCI ಡಿಸ್ಕ್ಲೋಸ್‌ ಮಾಡಿದೆ.

-masthmagaa.com

Contact Us for Advertisement

Leave a Reply