ಬಿಸಿಸಿಐ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಚೇತನ್‌ ಶರ್ಮಾ ಮರು ನೇಮಕ!

masthmagaa.com:

ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿದ ಬಳಿಕ ಇಡೀ ಆಯ್ಕೆ ಮಂಡಳಿಯನ್ನೇ ಬಿಸಿಸಿಐ ವಿಸರ್ಜನೆ ಮಾಡಿತ್ತು. ಇದೀಗ ಬರೋಬ್ಬರಿ 50 ದಿನಗಳ ಬಳಿಕ ಕೊನೆಗೂ ಭಾರತ ಕ್ರಿಕೆಟ್ ತಂಡದ ನೂತನ ಆಯ್ಕೆ ಸಮಿತಿಯನ್ನು ಪ್ರಕಟಿಸಿದೆ. ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಚೇತನ್‌ ಶರ್ಮಾ ಅವ್ರನ್ನ ಮರು ನೇಮಕ ಮಾಡಿದೆ. ಒಟ್ಟು ಐದು ಜನರಿರೋ ಸಮಿತಿಯಲ್ಲಿ ನಾಲ್ವರು ಹೊಸಬರಿಗೆ ಅವಕಾಶವನ್ನ ನೀಡಲಾಗಿದೆ. ಇದ್ರಲ್ಲಿ ಮಾಜಿ ಟೆಸ್ಟ್‌ ಕ್ರಿಕೆಟಿಗರಾದ ಸಲೀಲ್‌ ಅಂಕೋಲಾ, ಶಿವಸುಂದರ್‌ ದಾಸ್‌, ಸುಬ್ರೋತೊ ಬ್ಯಾನರ್ಜಿ ಮತ್ತು ಶ್ರೀಧರನ್‌ ಶರತ್‌ ಸ್ಥಾನ ಪಡೆದಿದ್ದಾರೆ. ಇನ್ನು ಇದೇ ಚೇತನ್ ಶರ್ಮಾ ನೇತೃತ್ವದ ಹಿಂದಿನ ಆಯ್ಕೆ ಸಮಿತಿ ಆಯ್ಕೆ ಮಾಡಿದ್ದ ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿಯೇ ಬಿಸಿಸಿಐ ಹೊಸ ಆಯ್ಕೆ ಸಮಿತಿಯ ರಚನೆಗೆ ಮುಂದಾಗಿತ್ತು. ಈಗ ಮತ್ತೊಮ್ಮೆ ಚೇತನ್ ಶರ್ಮಾ ಅವರನ್ನು ಮುಖ್ಯ ಆಯ್ಕೆಗಾರರನ್ನಾಗಿ ಆಯ್ಕೆ ಮಾಡಿರುವ ಬಿಸಿಸಿಐ ನಿರ್ಧಾರಕ್ಕೆ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply