IPL ಸ್ಪಾನ್ಸರ್‌ಶಿಪ್‌ಗೆ ಚೀನಾ ಕಂಪನಿಗಳಿಗೆ ನಿರ್ಬಂಧ: BCCI ನಿರ್ಧಾರ

masthmagaa.com:

IPLಗೆ ಹೊಸ ಟೈಟಲ್‌ ಸ್ಪಾನ್ಸರ್‌ ಹುಡುಕಾಟದಲ್ಲಿರೋ BCCI ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಹೊಸ ರೂಲ್ಸ್‌ಗಳನ್ನ ತಂದಿದೆ ಎನ್ನಲಾಗ್ತಿದೆ. ಅದ್ರಲ್ಲೂ ಭಾರತದ ಜೊತೆ ಒಳ್ಳೆ ಸಂಬಂಧ ಇಲ್ಲದ ಕಾರಣಕ್ಕೆ ಚೀನಾದ ಕಂಪನಿಗಳನ್ನ ಬಿಡ್ಡಿಂಗ್‌ನಿಂದ ಆಚೆ ಇಡೋಕೆ BCCI ನಿರ್ಧರಿಸಿದೆ. ಅಲ್ಲದೆ ಈ ಹಿಂದೆ ಸ್ಪಾನ್ಸರ್‌ ಆಗಿದ್ದ ಚೀನಾ ಮೂಲದ ಮೊಬೈಲ್‌ ಕಂಪನಿ ವಿವೋ, ಗಲ್ವಾನ್‌ ಸಂಘರ್ಷದ ನಂತರ BCCI ಜೊತೆಗಿನ 5 ವರ್ಷದ ಕಾಂಟ್ರಾಕ್ಟ್‌ ಮೊಟಕುಗೊಳಿಸಿತ್ತು. ಅದಾದ್ಮೇಲೆ ಸ್ಪಾನ್ಸರ್‌ಶಿಪ್‌ನ್ನ ಟಾಟಾ ಗ್ರೂಪ್ಸ್‌ಗೆ ವರ್ಗಾವಣೆ ಮಾಡಲಾಗಿತ್ತು. ಇದೇ ಕಾರಣಕ್ಕೆ BCCI ಈ ನಿರ್ಧಾರಕ್ಕೆ ಬಂದಿದೆ. ಟೆಂಟರ್‌ ಇನ್ವಿಟೇಷನ್‌ನಲ್ಲಿ ʻಬಿಡ್‌ ಮಾಡಲು ಬಯಸೋ ಕಾರ್ಪೊರೇಟ್‌ ಕಂಪನಿಗಳು ಭಾರತದ ಜೊತೆ ಉತ್ತಮ ಸ್ನೇಹ ಸಂಬಂಧವನ್ನ ಹೊಂದಿಲ್ಲದ ದೇಶಗಳ ಜೊತೆ ಸಂಪರ್ಕದಲ್ಲಿ ಇರ್ಬಾರ್ದುʼ ಅಂತೇಳಿದೆ. ಅದ್ರ ಜೊತೆಗೆ ಮದ್ಯ, ಟೊಬ್ಯಾಕೋ ಬ್ರಾಂಡ್‌ಗಳು, ಹಣದ ಗೇಮ್‌ಗಳು (ಫ್ಯಾಂಟಸಿ ಸ್ಪೋರ್ಟ್ಸ್‌ ಬಿಟ್ಟು), ಬೆಟ್ಟಿಂಗ್‌, ಕ್ರಿಪ್ಟೋ ಕರೆನ್ಸಿ ಹಾಗೂ ಸಾರ್ವಜನಿಕ ನೈತಿಕತೆಯನ್ನ ಕುಗ್ಗಿಸೋ ಪಾರ್ಟಿ ಅಥ್ವಾ ಕಂಪನಿಗಳಿಗೂ ನಿರ್ಬಂಧ ಹೇರಲಾಗಿದೆ.

-masthmagaa.com

Contact Us for Advertisement

Leave a Reply