ಹಾಂಗ್​​​ಕಾಂಗ್​​​ನಲ್ಲಿ ಪೊಲೀಸರಿಂದ ಮಾಧ್ಯಮದ ಮೇಲೆ ರೇಡ್​​!

masthmagaa.com:

ಹಾಂಗ್​​ಕಾಂಗ್​​​ನಲ್ಲಿ ದೇಶದ್ರೋಹಿ ಕಂಟೆಂಟ್​​ನ್ನು ಪಬ್ಲಿಶ್ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ 6 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಅದ್ರ ಬೆನ್ನಲ್ಲೇ ಆನ್​ಲೈನ್ ನ್ಯೂಸ್​​ ಸಂಸ್ಥೆಯೊಂದರ ಮೇಲೂ ಹಾಂಗ್​ಕಾಂಗ್ ಪೊಲೀಸರು ದಾಳಿ ನಡೆಸಿದ್ದಾರೆ. ಸುಮಾರು 200 ಮಂದಿ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಕಳೆದ ವರ್ಷ ಜಾರಿಗೆ ಬಂದ ನ್ಯಾಷನಲ್ ಸೆಕ್ಯೂರಿಟಿ ಕಾನೂನಿನ ಅಡಿಯಲ್ಲಿ ಈ ರೀತಿ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಬಂಧಿತರ ಮನೆಗಳಿಗೂ ಹೋಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply