ಬೆಳಗಾವಿ ಮಹಿಳೆಯ ಬೆತ್ತಲೆಗೊಳಿಸಿದ ಕೇಸ್‌ CIDಗೆ ವರ್ಗಾವಣೆ!

masthmagaa.com:

ಇತ್ತೀಚೆಗಷ್ಟೇ ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬಳನ್ನ ವಿವಸ್ತ್ರಗೊಳಿಸಿ, ಹಲ್ಲೆ ಮಾಡಿರೋ ಪ್ರಕರಣದ ತನಿಖೆಯನ್ನ ಇದೀಗ ರಾಜ್ಯ ಸರ್ಕಾರ CIDಗೆ ವಹಿಸಿದೆ. ಈ ಅಮಾನವೀಯ ಕೃತ್ಯಕ್ಕೆ ಕೇವಲ ರಾಜ್ಯದಲ್ಲಿ ಮಾತ್ರವಲ್ದೇ ಇಡೀ ದೇಶದಲ್ಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೈಕೋರ್ಟ್‌ ಕೂಡ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ರಾಜ್ಯ ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡಿತ್ತು. ವಿಪಕ್ಷ ಬಿಜೆಪಿಯಿಂದ್ಲೂ ಸಾಕಷ್ಟು ವಿರೋಧ ವ್ಯಕ್ತವಾಗಿದ್ವು. ಆದ್ರಿಂದ ಈ ಎಲ್ಲಾ ಬೆಳವಣಿಗೆಗಳನ್ನ ಇದೀಗ ಸ್ವಲ್ಪ ಸೀರಿಯಸ್‌ ಆಗಿ ತೆಗೆದ್ಕೊಂಡ ರಾಜ್ಯ ಸರ್ಕಾರ ಈ ಸೂಕ್ಷ್ಮ ಪ್ರಕರಣವನ್ನ CID ಕೈಗೆ ನೀಡೋಕೆ ಆದೇಶಿಸಿದೆ. ಇನ್ನೊಂದ್ಕಡೆ ಈ ಪ್ರಕರಣ ವಿಚಾರಣೆ ನಡೆಸ್ತಿರೋ ಹೈಕೋರ್ಟ್‌ ಇದೀಗ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ನಡೆಸ್ತಿರೋವಾಗ ಬಾಯಿ ಮುಚ್ಕೊಂಡು, ಕಣ್ಣು ಬಿಟ್ಕೊಂಡು, ಮೂಕಪ್ರೇಕ್ಷಕರಂತೆ ನಿಂತ್ಕೊಂಡಿದ್ದ ಜನರಿಂದ ದಂಡ ಸಂಗ್ರಹಿಸಿ. ಈ ರೀತಿ ಕಲೆಕ್ಟ್‌ ಮಾಡಿರೋ ಹಣವನ್ನ ಸಂತ್ರಸ್ತೆಗೆ ಕೊಡಿ ಅಂತ ಮುಖ್ಯ ನ್ಯಾಯಾಧೀಶ ಪ್ರಸನ್ನ ಬಿ ವರಾಳೆ ಮತ್ತು ನ್ಯಾ. ಕೃಷ್ಣ ದೀಕ್ಷಿತ್‌ ಅವ್ರ ವಿಭಾಗೀಯ ಪೀಠ ಅಡ್ವೈಸ್‌ ಮಾಡಿದೆ. ಜೊತೆಗೆ ಈ ರೀತಿ ಅಮಾನವೀಯವಾಗಿ ನಡೆದುಕೊಂಡ್ರೆ ಅಂದು ಬ್ರಿಟಿಷರು ಪುಂಡಕಂದಾಯ ಅನ್ನೋ ತೆರಿಗೆ ವಿಧಿಸ್ತಿದ್ರು ಅಂತ ತಮ್ಮ ಅಡ್ವೈಸ್‌ ಹಿಂದಿನ ಕಾರಣ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply