ಹಾಸನ: ಚನ್ನಕೇಶವ ರಥೋತ್ಸವದ ವೇಳೆ ಖುರಾನ್‌ ಪಠಣ

masthmagaa.com:

ಹಾಸನ ಜಿಲ್ಲೆಯ ಚನ್ನಕೇಶವ ರಥೋತ್ಸವದ ಸಂದರ್ಭದಲ್ಲಿ, ಕುರಾನ್‌ ಪಠಣ ಮಾಡುವ ವಿಚಾರ ಸಾಕಷ್ಟು ವಿವಾದ ಸೃಷ್ಟಿಸಿತ್ತು. ವಿವಾದದ ನಡುವೆಯೂ ರಥೋತ್ಸವ ವೇಳೆ ಕುರಾನ್‌ ಪಠಣ ಮಾಡಲು ಅವಕಾಶ ಒದಗಿಸಲಾಗಿತ್ತು. ಆದ್ರೆ ದೊಡ್ಡಮೇದೂರು ಗ್ರಾಮದ ಸಯ್ಯದ್‌ ಸಜ್ಜಾದ್‌ ಭಾಷಾ ಖಾದ್ರಿ ಅವ್ರು ಕುರಾನ್‌ ಪಠಣ ಮಾಡಿದ್ದಾರಾ ಅಥವಾ ಕೇವಲ ಪ್ರಾರ್ಥನೆ ಮಾಡಿದ್ದಾರಾ ಅನ್ನೊ ಗೊಂದಲ ಉಂಟಾಗಿದೆ. ಖಾದ್ರಿಯವರು ಕುರಾನ್‌ ಪಠಣ ಮಾಡಿಲ್ಲ ಕೇವಲ ಪ್ರಾರ್ಥನೆ ಮಾಡಿದ್ದಾರೆ ಅಂತ ದೇವಾಲಯದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಡಾ.ನಾರಾಯಣ ಸ್ವಾಮಿ ಹೇಳಿದ್ದಾರೆ. ಖಾದ್ರಿ ಕೂಡ ನಮ್ಮ ರೀತಿಯಲ್ಲಿ ದೇವರಿಗೆ ಶ್ಲೋಕ ಹೇಳಿ ವಂದನೆ ಸಮರ್ಪಿಸಿದ್ದೇನೆ. ಖುರಾನ್ ಪಠಣ ಮಾಡಿಲ್ಲ ಅಂತ ಹೇಳಿದ್ದಾರೆ. ಅಂದ್ಹಾಗೆ ಹಿಂದೂ ಪರ ಸಂಘಟನೆಗಳು ರಥೋತ್ಸವದ ವೇಳೆ ಕುರಾನ್‌ ಪಠಣ ಮಾಡಬಾರ್ದು ಅಂತ ವಿರೋಧ ವ್ಯಕ್ತಪಡಿಸಿದ್ರು. ಆದ್ರೆ ಸಂಪ್ರದಾಯದಂತೆ ದೇಗುಲದ ಮಟ್ಟಿಲುಗಳ ಬಳಿ ಕುರಾನ್‌ ಪಠಣಕ್ಕೆ ಅವಕಾಶ ನೀಡಲಾಗಿದೆ ಅಂತ ಜಿಲ್ಲಾಧಿಕಾರಿ ಅರ್ಚನಾ ತಿಳಿಸಿದ್ರು.

-masthmagaa.com

Contact Us for Advertisement

Leave a Reply