TMC ಆರೋಪ ತಳ್ಳಿ ಹಾಕಿದ ತನಿಖಾ ದಳ! NIA ಅಧಿಕಾರಿಗಳ ವಿರುದ್ದ FIR!

masthmagaa.com:

ಪಶ್ಚಿಮ ಬಂಗಾಳದಲ್ಲಿ ಕೇಂದ್ರದ ತನಿಖಾ ಸಂಸ್ಥೆ NIA ಹಾಗೂ ಬಿಜೆಪಿ ಮೈತ್ರಿ ಮಾಡ್ಕೊಂಡಿವೆ ಅಂತ TMC ನಾಯಕರು ಆರೋಪಿಸಿದ್ರು. ಈ ಆರೋಪವನ್ನ ಈಗ NIA ತಳ್ಳಿ ಹಾಕಿದೆ. ಅಲ್ದೇ ಏಪ್ರಿಲ್‌ 6ರಂದು TMC ಕಾರ್ಯಕರ್ತರ ಮೇಲೆ ನಾವು ನಡೆಸಿದ ದಾಳಿ ಕಾನೂನು ಬದ್ದವಾಗಿದೆ. ಸಂಪೂರ್ಣವಾಗಿ ಅಪ್ರಚೋದಿತವಾಗಿದೆ ಅಂತ NIA ಹೇಳಿದೆ. ಅಂದ್ಹಾಗೆ ಈ ದಾಳಿ ನಡೆಯೋಕೂ ಮುನ್ನ ಬಿಜೆಪಿ ನಾಯಕ ಜಿತೇಂದ್ರ ತಿವಾರಿ NIAನ ಪ್ರಮುಖ ಅಧಿಕಾರಿಯೊಬ್ರನ್ನ ಮೀಟ್‌ ಮಾಡಿದ್ರು ಅಂತ TMC ಆರೋಪಿಸಿತ್ತು. ಅಲ್ಲದೆ ಇದೇ ಕಾರಣಕ್ಕೆ ಬಿಜೆಪಿ ಹಾಗೂ NIA ಮಧ್ಯ ಮೈತ್ರಿ ಇದೆ ಅಂತ TMC ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಆರೋಪಿಸಿದ್ರು. ಈ ಆರೋಪವನ್ನ ಈಗ NIA ತಳ್ಳಿಹಾಕಿದೆ. ಇನ್ನೊಂದೆಡೆ ಇಬ್ಬರು TMC ಕಾರ್ಯಕರ್ತರನ್ನ NIA ವಶಕ್ಕೆ ಪಡೆದಿರೊ ವಿಚಾರವಾಗಿ ಬಂಗಾಳ ಪೋಲಿಸರು NIA ಅಧಿಕಾರಿಗಳ ವಿರುದ್ಧವೇ FIR ದಾಖಲಿಸಿದ್ದಾರೆ. ಬಂಧಿತರಲ್ಲೊಬ್ಬರ ಪತ್ನಿ NIA ಅಧಿಕಾರಿಗಳು ತನ್ನ ಪತಿಗೆ ಕಿರುಕುಳ ನೀಡಿದ್ದಾರೆ ಅಂತೇಳಿ ಪೋಲಿಸರಿಗೆ ದೂರು ನೀಡಿದ್ರು. ಹೀಗಾಗಿ ಪೊಲೀಸರು NIA ಅಧಿಕಾರಿಗಳ ವಿರುದ್ಧ FIR ದಾಖಲಿಸಿದ್ದಾರೆ.

-masthmagaa.com

Contact Us for Advertisement

Leave a Reply