ಬೆಂಗಳೂರಿನಲ್ಲಿ ಕಾಲರಾ ಭಯ! ಹಾಸ್ಟೆಲ್‌ ವಾರ್ಡನ್‌ ವಜಾ!

masthmagaa.com:

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು… ಇದ್ರೊಂದಿಗೆ ಕಾಲರಾ ಸೋಂಕಿನ ಭಯ ಕೂಡ ಜಾಸ್ತಿಯಾಗಿದೆ. ಮೊನ್ನೆಯಷ್ಟೇ ಬೆಂಗಳೂರಿನ ಮೆಡಿಕಲ್‌ ಕಾಲೇಜ್‌ & ರಿಸರ್ಚ್‌ ಇನ್ಸ್ಟಿಟ್ಯೂಟ್‌ನ 2 ವಿದ್ಯಾರ್ಥಿನಿಯರಿಗೆ ಕಾಲರಾ ಪಾಸಿಟಿವ್‌ ಬಂದಿದ್ದು, 47 ವಿದ್ಯಾರ್ಥಿಯರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆ ಕಾಲೇಜಿನ ಗರ್ಲ್ಸ್‌ ಹಾಸ್ಟೆಲ್‌ ವಾರ್ಡನ್‌ನ ಕೆಲಸದಿಂದ ವಜಾಗೊಳಿಸಲಾಗಿದೆ. ಸಮಸ್ಯೆ ಸರಿದೂಗಿಸಲು ಕಾಲೇಜಿನ ಅಧಿಕಾರಿಗಳು ಇದೀಗ ಹಾಸ್ಟೆಲ್‌ ಕಮಿಟಿ ರಚಿಸೋಕೆ ನಿರ್ಧರಿಸಿದ್ದಾರೆ. ಜೊತೆಗೆ ಹಾಸ್ಟೆಲ್‌ನ ಅಡುಗೆಮನೆಯನ್ನ ಕೂಡ ತಾತ್ಕಾಲಿಕವಾಗಿ ಮುಚ್ಚಿ…ಡಿಸ್‌ಇನ್ಫೆಕ್ಟ್‌ ಮಾಡಲಾಗ್ತಿದೆ. ಅಷ್ಟೇ ಅಲ್ದೇ ಹಾಸ್ಟೆಲ್‌ನಲ್ಲಿ ಅಡುಗೆ ಮಾಡೋರನ್ನೂ ತೆಗೆಯಲಾಗಿದೆ.

-masthmagaa.com

Contact Us for Advertisement

Leave a Reply