ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಜೋಡಿ ಕೊಲೆ ಆರೋಪಿಗಳು ಅಂದರ್‌!

masthmagaa.com:

ರಾಜಧಾನಿ ಬೆಂಗಳೂರಿನ ಹೆಬ್ಬಾಳ ಸಮೀಪದ ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಹಾಡಹಗಲೇ ಜೋಡಿ ಹತ್ಯೆ ನಡೆದಿದೆ. ಏರೋನಿಕ್ಸ್ ಮೀಡಿಯಾ ಪ್ರವೈಟ್ ಲಿಮಿಟೆಡ್ ಅನ್ನೊ ಸಂಸ್ಥೆಗೆ ನುಗ್ಗಿದ್ದ 3 ಜನ ಆರೋಪಿಗಳು ಕಚೇರಿಯಲ್ಲಿದ್ದ ಎಂಡಿ ಫಣೀಂದ್ರ ಹಾಗೂ ಸಿಇಒ ವಿನುಕುಮಾರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮನಬಂದಂತೆ ಹಲ್ಲೆ ನಡೆಸಿ ಕೊಲೆ‌ ಮಾಡಿದ್ದಾರೆ‌. ಸುದ್ಧಿ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕಂಪನಿಯ ಹಳೆ ಉದ್ಯೋಗಿ ಶಬರೀಷ್‌ ಅಲಿಯಾಸ್‌ ಜೋಕರ್‌ ಫಿಲಿಕ್ಸ್‌ ಹಾಗೂ ಅವನ ಸ್ನೇಹಿತರು ಸೇರಿಕೊಂಡು ಮಾಡಿರೋದು ಅಂತ ಗೊತ್ತಾಗಿದೆ. ಕೂಡಲೇ ಆರೋಪಿಗಳಿಗೆ ಬಲೆ ಬೀಸಿದ್ದ ಪೊಲೀಸರು ಆರೋಪಿ ಜೋಕರ್‌ ಫಿಲಿಕ್ಸ್ ಹಾಗೂ ಆತನ ಸ್ನೇಹಿತರನ್ನ ಬಂಧಿಸಿದ್ದಾರೆ. ಇನ್ನು ಕೊಲೆ ಮಾಡಿ ಎಸ್ಕೇಪ್‌ ಆಗಿದ್ದ ಫಿಲಿಕ್ಸ್‌ ನಿರಂತರವಾಗಿ ಮೊಬೈಲ್ ಯೂಸ್ ಮಾಡುತ್ತಿದ್ದ. ಯಾವ ಯಾವ ನ್ಯೂಸ್ ನಲ್ಲಿ ಕೊಲೆ ಬಗ್ಗೆ ಸ್ಟೋರಿ ಬರ್ತಿದೆ ಅಂತ ನೋಡ್ತಿದ್ದು, ಇನ್ ಸ್ಟಾಗ್ರಾಂನಲ್ಲಿ ಆಗಾಗ ಸ್ಟೇಟಸ್ ಕೂಡ ಅಪ್ಡೇಟ್‌ ಮಾಡುತ್ತಿದ್ದ. ಹೀಗಾಗಿ ಅವನನ್ನ ಪತ್ತೆಹಚ್ಚಲು ಸಹಾಯವಾಯ್ತು ಅಂತ ಪೊಲೀಸರು ಹೇಳಿದ್ದಾರೆ. ಬ್ಯುಸಿನೆಸ್‌ ವಿಚಾರವಾಗಿ ಹತ್ಯೆ ಮಾಡಿರೋದಾಗಿ ಫಿಲಿಕ್ಸ್‌ ಒಪ್ಪಿಕೊಂಡಿದ್ದಾನೆ. ಜೊತೆಗೆ ಜಿನೆಟ್‌ ಕಂಪನಿಯೊಂದ್ರಲ್ಲಿ ಕೆಲಸ ಮಾಡೋ ವೇಳೆ ತಾನು ಸಲುಗೆಯಿಂದ ಇದ್ದ ಹುಡುಗಿ ಜೊತೆ ಮೃತ ಫಣೀಂದ್ರನೂ ಕ್ಲೋಸ್‌ ಆಗಿದ್ದ. ಆಕೆಯನ್ನ ಮಾತನಾಡಿಸೋದು, ಕಾಲೆಳಿಯೋದು ಮಾಡ್ತಿದ್ದ‌. ಇದೇ ವಿಚಾರವಾಗಿ ಈ ಹಿಂದೆ ಕೂಡ ಗಲಾಟೆ ಆಗಿತ್ತು. ಅದೇ ದ್ವೇಷದಿಂದ ಕೊಲೆ ಮಾಡಿದ್ದೇನೆ ಅಂತ ಹೇಳಿಕೊಂಡಿದ್ದಾನೆ. ಹೀಗಾಗಿ ಈ ಕೊಲೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅಂದ್ಹಾಗೆ ಭೀಕರ ಡಬಲ್ ಕೊಲೆ ಮಾಡಿರೋ ಜೋಕರ್ ಫೆಲಿಕ್ಸ್ ಟಿಕ್ ಟಾಕ್ ಸ್ಟಾರ್ ಹಾಗೂ ರ‍್ಯಾಪರ್ ಅಂತ ಹೇಳಿಕೊಂಡು ಚಿತ್ರ ವಿಚಿತ್ರ ವೀಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದ. ಇದಲ್ಲದೆ ಸ್ಮಶಾನದಲ್ಲಿ ಹುಡುಗಿಗೆ ತಾಳಿ ಕಟ್ಟಿ ಸಖತ್ ಫೇಮಸ್ ಆಗಿದ್ದ.

-masthmagaa.com

Contact Us for Advertisement

Leave a Reply