ಬೆಂಗಳೂರು: 919ಕ್ಕೆ ಏರಿಕೆಯಾದ ಡೆಂಗ್ಯು ಜ್ವರ ಪ್ರಕರಣ

masthmagaa.com:

ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲು ಮಳೆಯಿಂದಾಗಿ ಡೆಂಗ್ಯು ಜ್ವರದ ಕೇಸ್‌ಗಳ ಸಂಖ್ಯೆ ಜಾಸ್ತಿಯಾಗ್ತಿವೆ. ಜುಲೈ ತಿಂಗಳಿನ ಕೇವಲ 11 ದಿನಗಳಲ್ಲಿ 178 ಮಂದಿಗೆ ಡೆಂಗ್ಯು ಜ್ವರ ದೃಢಪಟ್ಟಿದೆ. ಕಳೆದ ಒಂದು ತಿಂಗಳಿನಿಂದ ಡೆಂಗ್ಯು ಕೇಸ್‌ಗಳು ಏರಿಕೆಯಾಗ್ತಿದ್ದು, ಈ ವರ್ಷ BBMP ವ್ಯಾಪ್ತಿಯಲ್ಲಿ 3,565 ಮಂದಿ ಡೆಂಗ್ಯು ಶಂಕಿತರನ್ನು ಗುರುತಿಸಲಾಗಿದೆ. ಅವರಲ್ಲಿ 1,009 ಜನರ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಈವರೆಗೆ ಒಟ್ಟು 905 ಕೇಸ್‌ಗಳು ಕನ್ಫರ್ಮ್‌ ಆಗಿವೆ. ಜೊತೆಗೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 56 ಮಂದಿ ಶಂಕಿತರನ್ನು ಗುರುತಿಸಿ, 28 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷಿಸಲಾಗಿದೆ. ಅವರಲ್ಲಿ 14 ಜನರಿಗೆ ಈವರೆಗೆ ಜ್ವರ ದೃಢಪಟ್ಟಿದ್ದು, ಒಟ್ಟು ಕೇಸ್‌ಗಳ ಸಂಖ್ಯೆ 919ಕ್ಕೆ ಏರಿಕೆಯಾಗಿದೆ. ಆದ್ರೆ ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply