ಬೆಂಗಳೂರು: 18 ವರ್ಷಗಳಿಂದ ವ್ಯಕ್ತಿಯ ತಲೆ ಒಳಗಿದ್ದ ʻಬುಲೆಟ್‌ʼ !

masthmaga.com:

18 ವರ್ಷಗಳಿಂದ ಮೂರು ಸೆಂಟಿಮೀಟರ್‌ ಉದ್ದದ ಬುಲೆಟ್‌ನ್ನ ತನ್ನ ತಲೆ ಒಳಗೇನೇ ಇಟ್ಕೊಂಡು ನೋವು ಅನುಭವಿಸ್ತಿದ್ದ ಯೆಮೆನ್‌ನ ವ್ಯಕ್ತಿಗೆ ಕೊನೆಗೂ ಬೆಂಗಳೂರಿನಲ್ಲಿ ಪರಿಹಾರ ಸಿಕ್ಕಿದೆ. ಬೆಂಗಳೂರಿನ ಆ್ಯಸ್ಟರ್‌ ಆಸ್ಪತ್ರೆಯಲ್ಲಿ ಯೆಮೆನ್‌ ಮೂಲದ ಸಲ್ಹೆ (Saleh) ಅನ್ನೊ ವ್ಯಕ್ತಿ ತಲೆ ಒಳಗಿದ್ದ ಬುಲೆಟ್‌ನ್ನ ಆಪರೇಷನ್‌ ಮಾಡಿ ಯಶಸ್ವಿಯಾಗಿ ತೆಗೆಯಲಾಗಿದೆ. ಅಂದ್ಹಾಗೆ ಈತ 10 ವರ್ಷದವನಾಗಿದ್ದಾಗ ಯೆಮೆನ್‌ನಲ್ಲಿ ಅಂಗಡಿಯಿಂದ ಮನೆಗೆ ಹೋಗ್ತಿರೋವಾಗ, ಯಾವ್ದೋ ಎರಡು ಗುಂಪುಗಳ ನಡುವೆ ಜಗಳ ಆಗ್ತಿತ್ತು. ಆಗ ಈತನ ತಲೆಗೆ ಗುಂಡು ತಗುಲಿತ್ತು. ಕೂಡಲೇ ಅಲ್ಲಿನ ಆಸ್ಪತ್ರೆಗೆ ಈತನನ್ನ ಕರ್ಕೊಂಡ್‌ ಹೋದ್ರು ಕೂಡ, ಡಾಕ್ಟರ್‌ ಗಾಯವನ್ನ ಕ್ಲೀನ್‌ ಮಾಡಿದ್ರೆ ಹೊರತು ಬುಲೆಟ್‌ ತೆಗೆಯಲಿಲ್ಲ ಅಂತ ಸಲ್ಹೆ ವಿಡಿಯೋ ಕಾಲ್‌ ಒಂದ್ರಲ್ಲಿ ತಿಳಿಸಿದ್ದಾರೆ. ಬುಲೆಟ್‌ ಈತನ ಎಡ ಬದಿಯ ಕಿವಿಯನ್ನ ಸೀಳ್ಕೊಂಡು ತಲೆಬುರುಡೆಯ ಒಳಗೆ ಹೋಗಿ ಕೂತ್ಬಿಟ್ಟಿತ್ತು. ಇದ್ರಿಂದ ಈತ ಕಳೆದ 18 ವರ್ಷಗಳಿಂದ ಅತಿಯಾದ ತಲೆನೋವು, ಕಿವಿಯಲ್ಲಿ ಪಸ್‌ ಹಾಗೂ ರಕ್ತಸ್ರಾವದಂಥ ತೊಂದರೆಯನ್ನ ಫೇಸ್‌ ಮಾಡಿದ್ದಾನೆ. ಇದೀಗ ಬೆಂಗಳೂರಿನ ಆ್ಯಸ್ಟರ್‌ ಆಸ್ಪತ್ರೆಯ ಡಾಕ್ಟರ್ಸ್‌ ಈತನ ಹಲವು ವರ್ಷಗಳ ನೋವನ್ನ ವಾಸಿ ಮಾಡಿದ್ದಾರೆ. ಯಾವ್ದೇ ರೀತಿ ತೊಂದರೆಯಾಗ್ದಂತೆ ಬಹಳ ಸೇಫಾಗಿ ಬುಲೆಟ್‌ನ್ನ ತಲೆಯಿಂದ ಹೊರಗೆ ತೆಗೆದಿದ್ದಾರೆ. ಈ ಬುಲೆಟ್‌ನ್ನ ತೆಗೆಯೋದು ಬಹಳ ದೊಡ್ಡ ಸವಾಲಾಗಿತ್ತು. ಯಾಕಂದ್ರೆ ಸರ್ಜರಿ ವೇಳೆ ತೀವ್ರ ರಕ್ತಸ್ರಾವವಾಗೋ ಸಾಧ್ಯತೆ ಹೆಚ್ಚಿತ್ತು ಅಂತ ಡಾಕ್ಟರ್ಸ್‌ ಹೇಳಿದ್ದಾರೆ. ಆದ್ರೆ ಇದೀಗ ಯಾವ್ದೇ ರೀತಿಯ ತೊಂದರೆಯಾಗ್ದೇ ಯೆಮೆನ್‌ ವ್ಯಕ್ತಿಯ ಸರ್ಜರಿ ಸಕ್ಸಸ್‌ಫುಲ್‌ ಆಗಿದೆ.

-masthmagaa.com

Contact Us for Advertisement

Leave a Reply