ರಾಜ್ಯದಲ್ಲಿ ಲಾಯರ್ ಜಗದೀಶ್ ವಕೀಲಿಕೆ ಮಾಡದಂತೆ ಬ್ಯಾನ್​!

masthmagaa.com:

ನ್ಯಾಯಾಲಯದ ಆವರಣದಲ್ಲಿ ಗಲಾಟೆ ಮಾಡಿ, ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಅರೆಸ್ಟ್ ಆಗಿರೋ ಲಾಯರ್​ ಜಗದೀಶ್‌ ಕೆ.ಎನ್‌. ಮಹಾದೇವ್‌ರನ್ನ ಈಗ ರಾಜ್ಯ ಬಾರ್‌ ಕೌನ್ಸಿಲ್‌ ಕರ್ನಾಟಕದಲ್ಲಿ ವಕೀಲಿಕೆ ಮಾಡದಂತೆ ಬ್ಯಾನ್‌ ಮಾಡಿದೆ. ಬಾರ್‌ ಕೌನ್ಸಿಲ್‌ ಸದಸ್ಯರ ವಿರುದ್ಧ ಅವಾಚ್ಯ ಶಬ್ಧ ಬಳಕೆ ಹಾಗೂ ಬಾರ್‌ ಕೌನ್ಸಿಲ್‌ ಬಗ್ಗೆ ಅನಗತ್ಯ ಸುಳ್ಳು ಪ್ರಚಾರದ ಆರೋಪದ ಮೇಲೆ ಈ ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗಿದೆ. ವಕೀಲರೊಬ್ಬರ ಮರ್ಮಾಂಗಕ್ಕೆ ಒದ್ದು ಕೊಲೆಗೆ ಯತ್ನಿಸಿದ ಆರೋಪದಡಿ ಜಗದೀಶ್‌ರನ್ನ ನಿನ್ನೆ ಬಂಧನ ಮಾಡಿ ನ್ಯಾಯಾದೀಶರ ಎದುರು ಹಾಜರುಪಡಿಸಿದ್ದರು. ನ್ಯಾಯಾಲಯ ಅವರನ್ನ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು. ಜಗದೀಶ್‌ ವಿರುದ್ಧ ಹಲವು ಆರೋಪಗಳ ಅಡಿ ಕೇಸ್​ ದಾಖಲಿಸಲಾಗಿದೆ. ಎರಡು ಗುಂಪುಗಳ ನಡುವೆ ದ್ವೇಷ ಬಿತ್ತುವುದು, ದೊಂಬಿ, ಅಕ್ರಮವಾಗಿ ಗುಂಪು ಸೇರುವುದು, ಕೊಲೆ ಯತ್ನ , ಹಲ್ಲೆ, ಅಕ್ರಮ ಬಂಧನ , ಜೀವ ಬೆದರಿಕೆ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಜಗದೀಶ್ ಆಪ್ತರು, ಲಾಯರ್​ ಜಗದೀಶ್‌ ಅವರ ಮಗ ಹಾಗೂ ಇತರರ ಮೇಲೂ ಹಲ್ಲೆ ಆಗಿದೆ. ಈ ಬಗ್ಗೆ ಎಫ್‌ಐಆರ್‌ ದಾಖಲಾಗಿದೆ. ಆದ್ರೆ ಪೋಲಿಸರು ತಪ್ಪಿತಸ್ಥರನ್ನು ಇದುವರೆಗೂ ಬಂಧಿಸಿಲ್ಲ. ಐಪಿಎಸ್‌ ಅಧಿಕಾರಿಯೊಬ್ಬರ ಭ್ರಷ್ಟಾಚಾರದ ವಿರುದ್ದ ಜಗದೀಶ್‌ ಹೋರಾಟ ಮಾಡುತ್ತಿದ್ದರು. ಅದೇ ಅಧಿಕಾರಿ ಹೂಡಿದ್ದ ಮೊಕದ್ದಮೆಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್​ಗೆ ಬಂದಿದ್ದಾಗ ಗಲಾಟೆ ಆಗಿದೆ. ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಒಳಗಾಗಿ ಪೋಲಿಸರು ಹೀಗೆ ಮಾಡ್ತಿದ್ದಾರೆ ಅಂತ ಜಗದೀಶ್ ಆಪ್ತರು ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply