ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ವಿರುದ್ದ ಕನ್ನಡಪರ ಸಂಘಟನೆಗಳು ಪ್ರತಿಭಟನೆ! ಯಾಕೆ?

masthmagaa.com:

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಪ್ರಧಾನಿ ಮೋದಿಯವರು ಇನ್ನೆರಡು ದಿನಗಳಲ್ಲಿ ಅಂದ್ರೆ ಮಾರ್ಚ್‌ 12 ರಂದು ಹೆದ್ದಾರಿಯನ್ನ ಲೋಕಾರ್ಪಣೆಗೊಳಿಸಲಿದ್ದಾರೆ. ಆದರೆ ಉದ್ಘಾಟನೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸರ್ವೀಸ್‌ ರಸ್ತೆ, ಮೂಲ ಸೌಕರ್ಯ ಕಲ್ಪಿಸಿ ಉದ್ಘಾಟನೆ ಮಾಡಿ ಅಂತ ವಿವಿಧ ಕನ್ನಡ ಪರ ಸಂಘಟನೆಗಳು ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಟೋಲ್‌ ಬಳಿ ಪ್ರತಿಭಟನೆ ಮಾಡ್ತಿವೆ. ಅಲ್ದೇ ಮೋದಿ ಕಾರ್ಯಕ್ರಮದಲ್ಲಿ ಕಪ್ಪುಪಟ್ಟಿ ಪ್ರದರ್ಶಿಸೋಕೆ ರೆಡಿಯಾಗಿದೆ. ಇನ್ನು ಇದೇ 14ರಿಂದ ಟೋಲ್‌ ಸಂಗ್ರಹ ಮಾಡೋಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಸೋ ಒಂದ್‌ ವೇಳೆ ಟೋಲ್‌ ಸಂಗ್ರಹ ಮಾಡಲು ಪ್ರಯತ್ನಿಸಿದ್ರೆ ಟೋಲ್‌ಗಳನ್ನ ಧ್ವಂಸ ಮಾಡಲಾಗುತ್ತೆ ಅಂT ಸಂಘಟನೆಗಳು ಎಚ್ಚರಿಕೆ ನೀಡಿವೆ.ಇನ್ನೊಂದ್‌ ಕಡೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ದಶಪಥ ಹೆದ್ದಾರಿಯನ್ನ ಕೆಪಿಸಿಸಿ ವಕ್ತಾರ ಎಂ ಲಕ್ಮಣ್‌ ಕಿಲ್ಲರ್‌ ಹೈವೇ ಅಂತ ಕರೆದಿದ್ದಾರೆ. ಹೆದ್ದಾರಿಯಲ್ಲಿ ನಡೆದ ಅಪಘಾತಗಳ ವಿವರ ಮುಂದಿಟ್ಟುಕೊಂಡು, ಹೆದ್ದಾರಿ ಕಾಮಗಾರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣವಾಗಿದ್ದು, ಹೆದ್ದಾರಿಯಲ್ಲಿ ಈವರೆಗೆ 300 ಅಪಘಾತಗಳು ಸಂಭವಿಸಿವೆ. 6 ತಿಂಗಳಲ್ಲಿ 90 ಸಾವುಗಳಾಗಿವೆ ಅಂತ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply