ಬೆಂಗಳೂರು: 10 ವರ್ಷದ ವಿದ್ಯಾರ್ಥಿನಿ ಮೇಲೆ ಪ್ರಿನ್ಸಿಪಾಲ್‌ ಅತ್ಯಾಚಾರ

masthmagaa.com:

10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸೆಗಿರುವ ಘಟನೆ ಬೆಂಗಳೂರಿನ ಶಾಲೆಯೊಂದ್ರಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪ್ರಿನ್ಸಿಪಾಲ್‌ 65 ವರ್ಷದ ಲ್ಯಾಂಬರ್ಟ್‌ ಪುಷ್ಪರಾಜ್‌ನನ್ನ ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. 2ನೇ ತರಗತಿಯ ಬಾಲಕಿ, ತರಗತಿಯಲ್ಲಿ ಒಬ್ಬಳೆ ಇದ್ದಾಗ, ಆರೋಪಿ, ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸೆಗಿದ್ದಾನೆ ಅಂತ ಆರೋಪಿಸಲಾಗಿದೆ. ಮನೆಗೆ ಬಂದ ಬಾಲಕಿ ಹೊಟ್ಟೆನೋವು ಎಂದಿದ್ದಾಳೆ. ಅಲ್ದೇ ರಕ್ತಸ್ರಾವ ಕೂಡ ಆಗಿದ್ದು, ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಮಗುವಿನ ಮೇಲೆ ಅತ್ಯಾಚಾರ ಆಗಿರೋದಾಗಿ ವೈದ್ಯರು ಹೇಳಿದ್ದಾರೆ. ಪೋಷಕರು ಈ ಬಗ್ಗೆ ದೂರು ದಾಖಲಿಸಿದ್ದು, ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್‌ ದಾಖಲಾಗಿದೆ.

-masthmagaa.com

Contact Us for Advertisement

Leave a Reply