ಬೆಂಗಳೂರು: ಅತಿದೊಡ್ಡ ಸೈಬರ್‌ ಕ್ರೈಂ ನೆಟ್‌ವರ್ಕ್‌ ಭೇದಿಸಿದ ಸಿಸಿಬಿ ಪೊಲೀಸರು

masthmagaa.com:

ರಾಜ್ಯ ಹಾಗೂ ಹೊರ ರಾಜ್ಯಗಳ ಜನರಿಗೆ ಹಣ ಡಬಲ್‌ ಮಾಡುವ ಆಮಿಷವೊಡ್ಡಿ 854 ಕೋಟಿ ರೂಪಾಯಿ ವಂಚಿಸಿದ್ದ ಜಾಲವನ್ನ ಬೆಂಗಳೂರು ಸಿಸಿಬಿ ಪೊಲೋಸರು ಭೇದಿಸಿದ್ದು, 6 ಜನರನ್ನ ಬಂಧಿಸಿದ್ದಾರೆ. ಬಂಧಿತರನ್ನ ಫಣೀಂದ್ರ, ಮನೋಜ್‌, ಚಕ್ರಧರ್‌, ಶ್ರೀನಿವಾಸ್‌, ಸೋಮಶೇಖರ್‌ ಹಾಗೂ ವಸಂತ್‌ ಕುಮಾರ್‌ ಅಂತ ಗುರುತಿಸಲಾಗಿದೆ. ಈ ವಂಚಕರ ಟೀಮ್‌ ಹಲವು ವರ್ಷಗೀಂದ ಸೈಬರ್‌ ವಂಚನೆ ಮಾಡುತ್ತಿದ್ದರು ಅಂತ ತಿಳಿದು ಬಂದಿದೆ. ಸದ್ಯ ಇವ್ರಿಂದ 5 ಕೋಟಿ ನಗದು, 13 ಮೊಬೈಲ್‌ಗಳು, 7 ಲ್ಯಾಪ್‌ಟಾಪ್‌ಗಳು, ಪ್ರಿಂಟರ್‌ ಮತ್ತು ಹಾರ್ಡ್‌ ಡಿಸ್ಕ್‌ ಜಪ್ತಿ ಮಾಡಲಾಗಿದೆ. ಆರೋಪಿಗಳು ಇದುವರೆಗೂ ತಮ್ಮ 84 ಬ್ಯಾಂಕ್‌ ಅಕೌಂಟ್‌ಗಳ ಮೂಲಕ 854 ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply