ಗಾಜಾ ಜನರ ನೆರವಿಗೆ ಬಂದವರ ಹತ್ಯೆಗೆ ಪ್ರತಿಕ್ರಿಯಿಸಿದ ಇಸ್ರೇಲ್‌ PM!

masthmagaa.com:

ಗಾಜಾ ಜನರಿಗೆ ನೆರವು ನೀಡೋಕೆ ಹೋದಾಗ ʻವರ್ಲ್ಡ್‌ ಸೆಂಟ್ರಲ್‌ ಕಿಚನ್‌ʼ ಅನ್ನೋ NGOನ ಸದಸ್ಯರು ಇಸ್ರೇಲ್‌ ದಾಳಿಯಲ್ಲಿ ಮೃತಪಟ್ಟಿದ್ರು. ಈ ಬಗ್ಗೆ ಈಗ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ರಿಯಾಕ್ಟ್‌ ಮಾಡಿದ್ದಾರೆ. ನೆರವು ನೀಡೋರನ್ನ ಇಸ್ರೇಲ್‌ ಸೇನಾ ಪಡೆಗಳು ಹತ್ಯೆ ಮಾಡಿದ್ದು ನಿಜ ಅಂತ ಒಪ್ಕೊಂಡಿದ್ದಾರೆ. ʻದುರದೃಷ್ಟವಶಾತ್‌ ನಮ್ಮ ಸೇನಾ ಪಡೆಗಳು ಗಾಜಾ ಪಟ್ಟಿಯಲ್ಲಿದ್ದ ಅಮಾಯಕರ ಮೇಲೆ ಯಾವ್ದೇ ಉದ್ದೇಶವಿಲ್ಲದೇ ದಾಳಿ ನಡೆಸಿದ್ದಾರೆ. ಯುದ್ಧದಲ್ಲಿ ಇವೆಲ್ಲಾ ನಡೆಯುತ್ತೆ…ಏನ್‌ ಮಾಡೋಕಾಗಲ್ಲ. ಆದ್ರೆ ಈ ಬಗ್ಗೆ ನಾವು ತನಿಖೆ ನಡೆಸ್ತೀವಿ. ಮತ್ತೊಮ್ಮೆ ಈ ರೀತಿ ಆಗದಂತೆ ಜಾಗ್ರತೆ ವಹಿಸ್ತೀವಿʼ ಅಂತೇಳಿದ್ದಾರೆ. ಅಂದ್ಹಾಗೆ ಗಾಜಾ ಜನರ ನೆರವಿಗೆ ಧಾವಿಸಿದ್ದ ಈ NGOನ ಏಳು ಮಂದಿ ಸದಸ್ಯರು ಇಸ್ರೇಲ್‌ ದಾಳಿಗೆ ಸಿಕ್ಕಿ ಮೃತಪಟ್ಟಿದ್ರು. ಈ ವಿಚಾರವಾಗಿ ಇಸ್ರೇಲ್‌ ವಿರುದ್ದ ಅನೇಕ ರಾಷ್ಟ್ರಗಳಿಂದ ವಿರೋಧ ವ್ಯಕ್ತವಾಗಿತ್ತು. ಇಸ್ರೇಲ್‌ ಗೆಳೆಯ ಅಮೆರಿಕ ಕೂಡ ಈ ದಾಳಿಯನ್ನ ವಿರೋಧಿಸಿತ್ತು. ಇದರ ಬೆನ್ನಲ್ಲೇ ನೆತನ್ಯಾಹು ಈ ರೀತಿ ಸ್ಟೇಟ್‌ಮೆಂಟ್‌ ನೀಡಿದ್ದಾರೆ.

-masthmagaa.com

Contact Us for Advertisement

Leave a Reply