ಗಾಜಾದ ರಫಾ ನಗರದ ಮೇಲೆ ದಾಳಿ ನಡೆಸಲು ಇಸ್ರೇಲ್‌ ಪ್ಲಾನ್‌!

masthmagaa.com:

ಗಾಜಾ ಪಟ್ಟಿಯ ದಕ್ಷಿಣ ಭಾಗದ ರಫಾ ನಗರವನ್ನ ಸಂಪೂರ್ಣ ಧ್ವಂಸ ಮಾಡೋಕೆ ಇಸ್ರೇಲ್‌ ಪ್ಲಾನ್‌ ಹಾಕೊಂಡಿದೆ ಅನ್ನೋ ವರದಿಗಳು ಬರ್ತಿವೆ. ಯುದ್ದದಿಂದ ಜೀವ ಉಳಿಸಿಕೊಳ್ಳೋಕೆ ಅಲ್ಲಿನ ಜನ ರಫಾ ಸೇಫೆಸ್ಟ್‌ ಜಾಗ ಅಂತೇಳಿ ಲಕ್ಷಾಂತರ ಜನರು ಬಂದಿದ್ರು. ಆದ್ರೆ ಇಸ್ರೇಲ್‌ ಈ ನಗರವನ್ನೇ ಮೇನ್‌ ಟಾರ್ಗೆಟ್‌ ಮಾಡ್ಕೊಂಡಿದೆ. ಅಲ್ದೇ ರಫಾ ಮೇಲೆ ದಾಳಿ ನಡೆಸಲು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕೂಡ ಅಪ್ರೂವ್‌ ನೀಡಿದ್ದಾರೆ. ಹೀಗಂತ ಇಸ್ರೇಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದ್ಹಾಗೆ ಮಾರ್ಚ್‌ 15 ರಂದು ಆಹಾರ ಲೋಡಾಗಿರೋ ಹಡಗೊಂದು ಗಾಜಾಗೆ ಎಂಟ್ರಿ ಕೊಟ್ಟಿರೋ ಬೆನ್ನಲ್ಲೇ ಈ ನಿರ್ಧಾರ ಮಾಡಲಾಗಿದೆ.

-masthmagaa.com

Contact Us for Advertisement

Leave a Reply