ಸಮಾಜಿವಾದಿ ನಾಯಕ, ಬಿಹಾರದ ಕರ್ಪೂರಿ ಠಾಕೂರ್‌ಗೆ ಭಾರತರತ್ನ

masthmagaa.com:

ಎರಡು ಬಾರಿ ಬಿಹಾರದ ಸಿಎಂ ಆಗಿದ್ದ ಸಮಾಜಿವಾದಿ ನಾಯಕ ಕರ್ಪೂರಿ ಠಾಕೂರ್‌ಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಜನವರಿ 24ರಂದು ಅವರ ನೂರನೇ ವರ್ಷದ ಜನ್ಮ ಶತಮಾನೋತ್ಸವ. ಇದಕ್ಕೆ ಒಂದು ದಿನ ಮುಂಚೇನೆ ರಾಷ್ಟ್ರಪತಿ ಕಛೇರಿ ಈ ಆದೇಶ ಹೊರಡಿಸಿದೆ. ಕರ್ಪೂರಿ ಠಾಕೂರ್‌ ಜನನಾಯಕ ಅಂತಾನೆ ಹೆಸರುವಾಸಿಯಾಗಿದ್ರು. ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ 26 ತಿಂಗಳು ಜೈಲಿನಲ್ಲಿದ್ರು. ಸಿಎಂ ಆದ್ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನ ತಂದಿದ್ರು. ಅಲ್ಲದೆ ದುರ್ಬಲ ವರ್ಗಗಳಿಗೆ ಬಿಹಾರದ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಿ, ಹಲವಾರು ಕಲ್ಯಾಣ ಯೋಜನೆಗಳನ್ನ ತಂದಿದ್ರು. ಆ ಕಾಲದಲ್ಲೇ ಒಂದೇ ಸಲ 8000 ನಿರುದ್ಯೋಗಿ ಇಂಜಿನೀಯರ್‌, ವೈದ್ಯರಿಗೆ ಸರ್ಕಾರಿ ಉದ್ಯೋಗ ನೀಡಿದ್ರು. ಎಲ್ಲಕ್ಕಿಂತ ಹೆಚ್ಚಾಗಿ ಬಹಳ ಸರಳ ಜೀವಿಯಾಗಿದ್ರು. ಅವ್ರ ಬಳಿ ಕಾರು ಹಾಗೂ ಸ್ವಂತ ಮನೆ ಕೂಡ ಇರ್ಲಿಲ್ಲ. ಇದೀಗ ಇವ್ರಿಗೆ ದೇಶದ ಅತ್ಯುನ್ನತ ಪ್ರಶಸ್ತಿ, ಭಾರತ ರತ್ನ ಘೋಷಿಸಲಾಗಿದೆ.

-masthmagaa.com

Contact Us for Advertisement

Leave a Reply