ಟರ್ಕಿ ನೂತನ ಅಧ್ಯಕ್ಷ ತಾಯಿಪ್‌ ಎರ್ಡೋಆನ್‌ಗೆ ಅಭಿನಂದನೆ ತಿಳಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌!

masthmagaa.com:

ಟರ್ಕಿ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿ ಮೂರನೇ ಬಾರಿಗೆ ಅಧಿಕಾರವನ್ನ ವಹಿಸಿಕೊಳ್ತಿರುವ ಟರ್ಕಿ ಅಧ್ಯಕ್ಷ ತಾಯಿಪ್‌ ಎರ್ಡೋಆನ್ ಅವ್ರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅಭಿನಂದನೆ ತಿಳಿಸಿದ್ದಾರೆ. ಈ ವೇಳೆ ನಾನು ಎರ್ಡೋಆನ್ ಬಳಿ ಮಾತಾಡಿದೆ. ಅವ್ರಿಗೆ ನನ್ನ ಅಭಿನಂದನೆಗಳನ್ನ ತಿಳಿಸಿದೆ. ಎರ್ಡೋಆನ್ ಈಗಲೂ F-16 ಫೈಟರ್‌ ಜೆಟ್‌ ಕುರಿತಾಗಿ ನಮ್ಮ ಜೊತೆಯಲ್ಲಿ ಕೆಲಸ ಮಾಡಲು ಬಯಸುತ್ತಿದ್ದಾರೆ. ಜೊತೆಗೆ ಸ್ವಿಡನ್‌ ನ್ಯಾಟೋಗೆ ಸೇರೋಕೆ ಸಂಬಂಧಿಸಿದ ಮಸೂದೆಯನ್ನ ಪಾಸ್‌ ಮಾಡುವ ವಿಚಾರವಾಗಿ ಮಾತಾಡಲು ನಾವು ಇಚ್ಛಿಸಿದ್ದೇವೆ ಅನ್ನೋದನ್ನ ಅವ್ರಿಗೆ ತಿಳಿಸಿದ್ದೇನೆ. ಈ ಬಗ್ಗೆ ನಾವು ಮುಂದಿನ ವಾರದಲ್ಲಿ ಮಾತುಕತೆ ನಡೆಸಲಿದ್ದೇವೆ ಅಂತ ಬೈಡೆನ್‌ ಹೇಳಿದ್ದಾರೆ. ಅಂದ್ಹಾಗೆ ನ್ಯಾಟೋ ಸೇರಲು ಪ್ರಯತ್ನಿಸುತ್ತಿರುವ ಸ್ವಿಡನ್‌ನ ಬಿಡ್‌ಗೆ ಟರ್ಕಿ ಅನುಮೋದನೆ ನೀಡಲು ನಿರಾಕರಿಸುತ್ತಿದೆ. ಸ್ವಿಡನ್‌ನ ಬಿಡ್‌ಗೆ ಅನುಮೋದನೆ ಕೊಡ್ಬೇಕು ಅಂದ್ರೆ ಶಂಕಿತ ಖುರ್ದಿಶ್‌ ಉಗ್ರರನ್ನ ನಮಗೆ ಒಪ್ಪಿಸಬೇಕು ಅಂತ ಟರ್ಕಿ ಪಟ್ಟು ಹಿಡಿದಿದೆ. ಈ ಹಿನ್ನಲೆಯಲ್ಲಿ ಈ ಕುರಿತು ಮಾತುಕತೆ ನಡೆಸೋದಾಗಿ ಬೈಡನ್‌ ತಿಳಿಸಿದ್ದಾರೆ. ಇತ್ತ ಚುನಾವಣೆಯಲ್ಲಿ ಮೂರನೇ ಬಾರಿಗೆ ಗೆದ್ದು ಬೀಗಿರುವ ಎರ್ಡೋಆನ್ ಅವ್ರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕೂಡ ಕಂಗ್ರಾಜುಲೇಟ್‌ ಮಾಡಿದ್ದಾರೆ. ಇದೇ ವೇಳೆ ಎರ್ಡೋಆನ್ ಅವ್ರಿಗೆ ಟರ್ಕಿ ಜನರು ವ್ಯಕ್ತಪಡಿಸಿರೋ ಬೆಂಬಲದಿಂದ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನ ಅಭಿವೃದ್ಧಿಪಡಿಸಲು ಸಹಾಯವಾಗಲಿದೆ. ಈ ಮೂಲಕ ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿದೆ ಅಂತ ಪುಟಿನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply